ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ ವೃದ್ಧಿ | ಷೇರುಪೇಟೆ ಕುಸಿವ ಆತಂಕ: ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌

ಮುಂದುವರಿದ ವಿದೇಶಿ ಬಂಡವಾಳ ಒಳಹರಿವು: ವಿಜಯಕುಮಾರ್‌
Published 22 ಜುಲೈ 2023, 23:30 IST
Last Updated 22 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಷೇರುಪೇಟೆಗಳ ಬಂಡವಾಳ ಮೌಲ್ಯ ಏರಿಕೆ ಕಾಣುತ್ತಿರುವುದು ಆತಂಕ ಮೂಡಿಸುತ್ತಿದೆ. ಬಂಡವಾಳ ಮೌಲ್ಯವು ಗರಿಷ್ಠ ಮಟ್ಟದಲ್ಲಿ ಇದ್ದಾಗ ಕೆಲವು ನಕಾರಾತ್ಮಕ ಅಂಶಗಳು ಭಾರಿ ಕುಸಿತಕ್ಕೆ ಕಾರಣವಾಗಬಹುದು. ಷೇರುಪೇಟೆಗಳಲ್ಲಿ ಶುಕ್ರವಾರ ನಡೆದ ನಕಾರಾತ್ಮಕ ವಹಿವಾಟು ಇದಕ್ಕೆ ಉತ್ತಮ ನಿದರ್ಶನವಾಗಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ತಿಳಿಸಿದ್ದಾರೆ.

ಇನ್ಫೊಸಿಸ್‌ ಮತ್ತು ಎಚ್‌ಯುಎಲ್‌ ಸಂಬಂಧಿಸಿದ ನಕಾರಾತ್ಮಕ ಸುದ್ದಿಗಳಿಂದಾಗಿ ಶುಕ್ರವಾರ ಸೆನ್ಸೆಕ್ಸ್‌ 887 ಅಂಶ ಕುಸಿತ ಕಾಣುವಂತಾಯಿತು ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. ಇನ್ಫೊಸಿಸ್‌ ಕಂಪನಿಯು ಪ್ರಸಕ್ತ ಹಣಕಾಸು ವರ್ಷಕ್ಕೆ ತನ್ನ ವರಮಾನದ ಮುನ್ನೋಟದಲ್ಲಿ ಭಾರಿ ಕಡಿತ ಮಾಡಿದೆ. ಇನ್ನೊಂದೆಡೆ ಎಚ್‌ಯುಎಲ್‌ನ ನಿವ್ವಳ ಲಾಭವು ಮಾರುಕಟ್ಟೆ ನಿರೀಕ್ಷೆಗಿಂತಲೂ ಕಡಿಮೆ ಆಗಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜುಲೈನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದ್ದಾರೆ. ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ಜುಲೈ 21ರವರೆಗೆ ನಡೆದಿರುವ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ₹43,804 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಣಕಾಸು, ಆಟೊಮೊಬೈಲ್‌, ಬಂಡವಾಳ ಸರಕುಗಳು, ರಿಯಾಲ್ಟಿ ಮತ್ತು ಎಫ್‌ಎಂಸಿಜಿ ವಲಯಗಳಲ್ಲಿ ಹೂಡಿಕೆಯನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಈ ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಾರಣವಾಗಿದ್ದು, ಆ ಮೂಲಕ ಸೆನ್ಸೆಕ್ಸ್‌, ನಿಫ್ಟಿಯು ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸಲು ನೆರವಾಗಿದೆ ಎಂದು ವಿಜಯಕುಮಾರ್ ಹೇಳಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) (ಕೋಟಿಗಳಲ್ಲಿ)

ಜುಲೈ 17;₹73

ಜುಲೈ 18;₹2,116

ಜುಲೈ 19;₹1,165

ಜುಲೈ 20;₹3,371

ಜುಲೈ 21;₹1,999 ಮಾರಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT