ನವದೆಹಲಿ:ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ಸಂಗ್ರಹವು ಮೂರು ತಿಂಗಳ ಬಳಿಕ ಮತ್ತೆ ₹ 1 ಲಕ್ಷ ಕೋಟಿಯನ್ನು ದಾಟಿದೆ.

ನವೆಂಬರ್ನ ಹಬ್ಬದ ಸಂದರ್ಭದಲ್ಲಿ ಖರೀದಿ ಚಟುವಟಿಕೆ ಹೆಚ್ಚಾಗಿ ನಡೆದಿದ್ದರಿಂದ ಜಿಎಸ್ಟಿ ಸಂಗ್ರಹದಲ್ಲಿ ಶೇ 6ರಷ್ಟು ಏರಿಕೆಯಾಗಿದ್ದು ₹ 1.03 ಲಕ್ಷ ಕೋಟಿಗೆ ತಲುಪಿದೆ.

2018ರ ನವೆಂಬರ್ನಲ್ಲಿ ₹ 97,637 ಕೋಟಿ ಸಂಗ್ರಹವಾಗಿತ್ತು. 2019ರ ಅಕ್ಟೋಬರ್ನಲ್ಲಿನ ಸಂಗ್ರಹವು ₹ 95,380 ಕೋಟಿ ಇತ್ತು.

ಜಿಎಸ್ಟಿ ಜಾರಿಗೆ ಬಂದ ಬಳಿಕ ಮೂರನೇ ಬಾರಿಗೆ ತಿಂಗಳೊಂದರ ಅತಿ ಗರಿಷ್ಠ ತೆರಿಗೆ ಸಂಗ್ರಹ ಇದಾಗಿದೆ. ಈ ಹಿಂದೆ 2019 ಏಪ್ರಿಲ್ ಮತ್ತು 2019ರ ಮಾರ್ಚ್ ಸಂಗ್ರಹವೂ ಗರಿಷ್ಠ ಮಟ್ಟದಲ್ಲಿತ್ತು.

2017ರ ಜುಲೈನಲ್ಲಿ ಜಿಎಸ್ಟಿ ಜಾರಿಯಾದ ಬಳಿಕ ಎಂಟನೇ ಬಾರಿಗೆ ಜಿಎಸ್ಟಿ ಸಂಗ್ರಹವು ₹ 1 ಲಕ್ಷ ಕೋಟಿ ಮೊತ್ತವನ್ನು ದಾಟಿದಂತಾಗಿದೆ.

ಅಕ್ಟೋಬರ್ ತಿಂಗಳಜಿಎಸ್ಟಿಆರ್–3ಬಿ ಸಲ್ಲಿಕೆಯು77.83 ಲಕ್ಷಕ್ಕೆ ತಲುಪಿದೆ.

‘₹ 1 ಲಕ್ಷ ಕೋಟಿ ದಾಟಿರುವುದು ಉತ್ತೇಜನಕಾರಿ ಬೆಳವಣಿಗೆಯಾಗಿದೆ. ವಿತ್ತೀಯ ಕೊರತೆ ನಿಯಂತ್ರಿಸಲು ನೆರವಾಗಲಿದೆ. ಮುಂದಿನ ತಿಂಗಳುಗಳಲ್ಲಿಯೂ ತೆರಿಗೆ ಸಂಗ್ರಹವು ಇದೇ ಪ್ರಮಾಣದಲ್ಲಿರುವ ವಿಶ್ವಾಸವಿದೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಎಂ.ಎಸ್. ಮಣಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ತೆರಿಗೆ ಸಂಗ್ರಹ

ಆಗಸ್ಟ್; ₹ 98,202 ಕೋಟಿ

ಸೆಪ್ಟೆಂಬರ್; ₹ 91,916 ಕೋಟಿ

ಅಕ್ಟೋಬರ್; ₹ 95,380 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.