ಬುಧವಾರ, ಜನವರಿ 29, 2020
25 °C

ಶೇ 2ರಷ್ಟು ಕುಸಿದ ರಿಲಯನ್ಸ್‌ ಷೇರು; ಅರಾಮ್ಕೊಗೆ ಪಾಲು ಮಾರಲು ಸರ್ಕಾರ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಲಯನ್ಸ್‌ ಇಂಡಸ್ಟ್ರೀಸ್‌

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ತನ್ನ ತೈಲ ಮತ್ತು ರಾಸಾಯನಿಕಗಳ ವಹಿವಾಟಿನಲ್ಲಿ ಶೇ 20ರಷ್ಟು ಪಾಲು ಬಂಡವಾಳವನ್ನು ಸೌದಿ ಅರೇಬಿಯಾದ ಅತಿ ದೊಡ್ಡ ತೈಲ ಕಂಪನಿ ಅರಾಮ್ಕೊಗೆ ಮಾರಾಟ ಮಾಡುವುದಕ್ಕೆ ತಡೆ ನೀಡುವಂತೆ ಸರ್ಕಾರ ದೆಹಲಿ ಹೈ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಿಲಯನ್ಸ್‌ ಷೇರು ಶೇ 2.5ರಷ್ಟು ಕುಸಿತ ಕಂಡಿತು. 

ಪನ್ನಾ–ಮುಕ್ತ ಮತ್ತು ತಪತಿ (ಪಿಎಂಟಿ) ತೈಲ ಮತ್ತು ಅನಿಲ ವಲಯ ವ್ಯವಹಾರದಲ್ಲಿ ಬಾಕಿ ಇರುವ ₹ 24,909 ಕೋಟಿ ಪಾವತಿ ಬಗ್ಗೆ ಸರ್ಕಾರ ಕೋರ್ಟ್‌ ಮೊರೆ ಹೋಗಿದೆ. ಬಾಕಿ ಪಾವತಿ ವರೆಗೂ ಉದ್ದೇಶಿತ ₹1,06,797 ಕೋಟಿ ರಿಲಯನ್ಸ್ ಪಾಲು ಬಂಡವಾಳ ಮಾರಾಟಕ್ಕೆ ತಡೆ ನೀಡುವಂತೆ ಕೇಳಿದೆ. ಶುಕ್ರವಾರ ₹ 1599ರಲ್ಲಿ ವಹಿವಾಟು ನಡೆಸಿದ್ದ ರಿಲಯನ್ಸ್‌ ಷೇರು, ಸೋಮವಾರ ₹ 1560– ₹ 1566ರ ನಡುವೆ ವಹಿವಾಟು ಕಂಡಿದೆ. 

ಇದನ್ನೂ ಓದಿ: ಅರಾಮ್ಕೊ, ಬಿಪಿಗೆ ಆರ್‌ಐಎಲ್‌ ಪಾಲು

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೆನ್ಸೆಕ್ಸ್‌ ಸೋಮವಾರ ಅಧಿಕ ಏರಿಳಿತ ಕಂಡಿದ್ದು, ಹಿಂದಿನ ವಹಿವಾಟಿಗಿಂತ 60.68 ಅಂಶಗಳು ಕಡಿಮೆ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ. ನಿಫ್ಟಿ 12,274 ಅಂಶಗಳಲ್ಲಿ ತಲುಪಿದೆ. 

ಟೈಟಾನ್‌ ಕಂಪನಿ, ವೇದಾಂತಾ ಹಾಗೂ ಟಾಟಾ ಮೋಟಾರ್ಸ್‌, ಕೊಟಾಕ್‌ ಬ್ಯಾಂಕ್‌, ಒಎನ್‌ಜಿಸಿ ಷೇರುಗಳು ಏರಿಕೆ ಹಾದಿ ಹಿಡಿದಿವೆ. ಎಸ್‌ಬಿಐ, ಐಸಿಐಸಿಐ, ಫೆಡರಲ್‌ ಬ್ಯಾಂಕ್‌ ಷೇರುಗಳು ಶೇ 1.37ರಷ್ಟು ಕುಸಿದಿವೆ.  

ಕಳೆದ ವಾರ ಸೆನ್ಸೆಕ್ಸ್ ಶೇ 1.63 ರಷ್ಟು ಏರಿಕೆ ಕಂಡು 41,681 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಹಿಂದಿನ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,891 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಅಲ್ಲದೆ ದೇಶಿ ಹೂಡಿಕೆದಾರರು ₹ 3,751 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಹೊಸ ವರ್ಷ ಮತ್ತು ಕ್ರಿಸ್‌ಮಸ್ ರಜೆ ಇರುವ ಕಾರಣ ವಿಶ್ವದ ಪ್ರಮುಖ ಷೇರು ಮಾರುಕಟ್ಟೆಗಳು ಈ ವಾರ ಕಾರ್ಯನಿರ್ವಹಿಸುವುದಿಲ್ಲ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು