ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ರಾಜರ ಕಾಲದಲ್ಲಿ ನಿರ್ಮಾಣಗೊಂಡಿರುವ ಅನೇಕ ದೇವಾಲಯಗಳು ಇಂದಿಗೂ ವಿಜ್ಞಾನ ಜಗತ್ತಿಗೆ ಅಚ್ಚರಿಯಾಗಿ ಉಳಿದಿವೆ. ಅಂತಹ ದೇವಾಲಯಗಳ ಪೈಕಿ ರಾಜಸ್ಥಾನದ ಧೋಲ್ಪುರದಲ್ಲಿರುವ ಅಚಲೇಶ್ವರ ಮಹಾದೇವ ದೇವಾಲಯ ಒಂದು.

ಶಿಲ್ಪಿಗಳ ಕೈಚಳಕಕ್ಕೆ ಈ ದೇವಾಲಯ ಉತ್ತಮ ಉದಾಹರಣೆಯಾಗಿದೆ. ಇಲ್ಲಿ ವಿಶೇಷ ಶಿವಲಿಂಗವಿದೆ. ಭಾರತದ ವಾಸ್ತು ಶಿಲ್ಪದ ಕಲೆ ಹಾಗೂ ವೈವಿಧ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

2,500 ವರ್ಷದಷ್ಟು ಹಳೆಯದಾದ ಅಚಲೇಶ್ವರ ಮಹಾದೇವ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಚಂಬಲ್ ನದಿಯ ದಡದಲ್ಲಿರುವ ಈ ದೇವಾಲಯದಲ್ಲಿ ವಿಶೇಷವಾದ ಶಿವಲಿಂಗವಿದ್ದು, ಈ ಲಿಂಗ ಅಚ್ಚರಿಯಿಂದ ಕೂಡಿದೆ. ಇಲ್ಲಿರುವ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ. ಅದಕ್ಕೆ ಕಾರಣ ಈ ಲಿಂಗದಲ್ಲಿರುವ ವಿಶೇಷ ಶಕ್ತಿ ಎಂಬುದು ಸ್ಥಳೀಯರ ಅಭಿಪ್ರಾಯ.
.LEPAKSHI | ‘ಗಾಳಿಯಲ್ಲಿ ತೇಲುತ್ತೆ ಈ ಕಂಬ’: ಇದು ಎಲ್ಲಿಯೂ ಕಾಣಸಿಗದ ಅದ್ಭುತ.ಚಳಿಗಾಲದ ಪ್ರವಾಸ ಹೋಗುವ ಭಾರತೀಯರಿಗೆ ಈ ಸ್ಥಳಗಳೇ ‘ಹಾಟ್ ಫೇವರಿಟ್’! ವರದಿ ಬಹಿರಂಗ.
ದಿನಕ್ಕೆ 3 ಬಾರಿ ಬಣ್ಣ ಬದಲಾಯಿಸುತ್ತೆ:

ಇಲ್ಲಿರುವ ಶಿವಲಿಂಗ ದಿನಕ್ಕೆ 3 ಬಾರಿ ತನ್ನ ಬಣ್ಣ ಬದಲಾಯಿಸುತ್ತದೆ. ಬೆಳಿಗ್ಗೆ ಕೆಂಪು ಬಣ್ಣದಿಂದ ಕಂಡರೆ, ಮಧ್ಯಾಹ್ನ ಕೇಸರಿ ಬಣ್ಣದಿಂದ ಕೂಡಿರುತ್ತದೆ. ಸಂಜೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಇಲ್ಲಿನ ಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುತ್ತದೆ. ಸ್ಥಳೀಯರ ಹಾಗೂ ಪುರಾಣ ಕಥೆಗಳ ಪ್ರಕಾರ, ಈ ಶಿವಲಿಂಗ ಅತೀವ ಶಕ್ತಿಯುಳ್ಳ ಶಿವಲಿಂಗವೆಂಬ ನಂಬಿಕೆ ಇದೆ.

108 ಕ್ಕೂ ಹೆಚ್ಚು ಶಿವನ ದೇವಾಲಯ:

ಇಲ್ಲಿಗೆ ಸಮೀಪವಿರುವ ಮೌಂಟ್ ಅಬು ಎಂಬಲ್ಲಿ 108ಕ್ಕೂ ಹೆಚ್ಚು ಶಿವನ ದೇವಾಲಯಗಳಿವೆ. ಸ್ಕಂದ ಪುರಾಣದ ಉಲ್ಲೇಖದಂತೆ ವಾರಣಾಸಿ ಶಿವನ ನಗರವಾಗಿತ್ತು. ಆ ಸಮಯದಲ್ಲಿ ಮೌಂಟ್ ಅಬು ಉಪನಗರವಾಗಿತ್ತು ಎಂದು ಹೇಳಲಾಗುತ್ತದೆ. ಇಲ್ಲಿ ಶಿವ ಹೆಬ್ಬೆರಳುಗಳ ಗುರುತುಗಳಿದ್ದು, ಅಚಲಗಢ ಕೋಟೆಯ ಸಮೀಪ ಈ ದೇವಾಲಯಗಳಿವೆ. ಶ್ರಾವಣ ಹಾಗೂ ಶಿವರಾತ್ರಿಯಲ್ಲಿ ಇಲ್ಲಿನ ದೇವಾಲಯಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರ ಬರುತ್ತಾರೆ.

ಇದರ ಹಿಂದಿನ ರಹಸ್ಯವೇನು?

ಈಗಾಗಲೇ ವಿಜ್ಞಾನಿಗಳು ಈ ಶಿವಲಿಂಗದ ಹಿಂದಿನ ರಹಸ್ಯವನ್ನು ಪತ್ತೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಶಿವಲಿಂಗ ಬಣ್ಣ ಬದಲಿಸುವ ಹಿಂದಿನ ರಹಸ್ಯವೇನು ಎಂಬುದರ ಕುರಿತು ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.

ಬಣ್ಣ ಬದಲಿಸುವ ಇತರೆ ಲಿಂಗಗಳು ಎಲ್ಲಿವೆ :

ತಮಿಳುನಾಡಿನಲ್ಲಿರುವ ಶ್ರೀ ಕಲ್ಯಾಣ ಸುಂದರೇಶ್ವರ ದೇವಸ್ಥಾನದಲ್ಲಿ ಒಂದು ಶಿವಲಿಂಗವಿದೆ. ಈ ಶಿವಲಿಂಗ ದಿನಕ್ಕೆ 5 ಬಾರಿ ತನ್ನ ಬಣ್ಣ ಬದಲಾಯಿಸುತ್ತದೆ.

ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರು ವಿರೂಪಾಕ್ಷಿ ದೇವಾಲಯದಲ್ಲಿ ಬಣ್ಣ ಬದಲಿಸುವ ಶಿವಲಿಂಗವಿದೆ. ಅಲ್ಲದೇ ಉಡುಪಿಯ ಸಮೀಪದ ಕಾಂತೇಶ್ವರ ದೇವಾಲಯದಲ್ಲಿರುವ ಶಿವಲಿಂಗ ಕೂಡ ಬಣ್ಣ ಬದಲಾಯಿಸುತ್ತದೆ.

.ದಾಂಡೇಲಿ ಪ್ರವಾಸ: ಇಲ್ಲಿಗೆ ಹೋದಾಗ ನೀವು ನೋಡಲೇಬೇಕಾದ ಪ್ರಮುಖ ಸ್ಥಳಗಳಿವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.