ಶಿವ ಪೂಜೆಯಲ್ಲಿ ವಿವಿಧ ಹೂವುಗಳು ಹಾಗೂ ಪತ್ರೆಗಳನ್ನು ಬಳಸುತ್ತಾರೆ. ಅದೇ ರೀತಿ ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ಪತ್ರೆಗಳಲ್ಲಿ ಒಂದಾಗಿದೆ. ಅಲ್ಲದೇ ತುಳಸಿ ಪತ್ರೆಯನ್ನೂ ಪೂಜೆಯಲ್ಲಿ ಬಳಸಲಾಗುತ್ತದೆ. ಪೂಜೆಯಲ್ಲಿ ಬಿಲ್ವಪತ್ರೆ ಹಾಗೂ ತುಳಸಿಯ ಮಹತ್ವವೇನು ಎಂಬುದನ್ನು ತಿಳಿಯೋಣ.

ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರಿಂದಾಗುವ ಲಾಭಗಳು:

ಬಿಲ್ವಪತ್ರೆಯಲ್ಲಿ ಶಿವ ತತ್ವದಲ್ಲಿನ ತಾರಕ ಶಕ್ತಿಯಾದ ವಾಹಕ ಮತ್ತು ಈ ಪತ್ರೆಯ ತೊಟ್ಟಿನಲ್ಲಿ ಶಿವ ತತ್ವದ ಮಾರಕಶಕ್ತಿಯ ವಾಹಕತೆ ಅಡಗಿರುತ್ತದೆ ಎಂಬ ನಂಬಿಕೆ ಇದೆ.

ಶಿವ ಪ್ರಕೃತಿಯ ತಾರಕವಾಗಿರುವುದರಿಂದ ಆರಾಧನೆ ಮಾಡುವವರು ಪ್ರಕೃತಿ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿ ಪೂಜೆ ಸಲ್ಲಿಸುವುದು ಶುಭಕರವಾಗಿದೆ. ಶಿವನ ತಾರಕ ತತ್ವದ ಲಾಭ ಪಡೆದುಕೊಳ್ಳಲು ಶಿವಲಿಂಗದ ಮೇಲೆ ಬಿಲ್ವಪತ್ರೆಯ ತುದಿಗಳನ್ನು ನಮ್ಮ ಕಡೆಗೆ ಮಾಡಿ ಅರ್ಪಿಸಬೇಕು.
.ತುಳಸಿ ತೀರ್ಥ: ಇದರ ಮಹತ್ವವೇನು, ಹೇಗೆ ಸ್ವೀಕರಿಸಬೇಕು? ಇಲ್ಲಿದೆ ಮಾಹಿತಿ.ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ.
ಶಿವನ ಮಾರಕ ತತ್ವದ ಲಾಭವನ್ನು ಪಡೆದುಕೊಳ್ಳಲು ಪತ್ರೆಯ ತೊಟ್ಟು ನಮ್ಮ ಕಡೆಗೆ ಮಾಡಿ ಎಲೆಗಳ ತುದಿಗಳನ್ನು ಶಿವದೆಡೆಗೆ ಮಾಡಿ ಅರ್ಪಿಸಬೇಕು.

ಶಿವಲಿಂಗದ ಪವಿತ್ರಕಗಳನ್ನು ನಮ್ಮೆಡೆಗೆ ಸೆಳೆದುಕೊಳ್ಳಲು ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಲಾಗುತ್ತದೆ.

ಬಿಲ್ವದ ಫಲಕ್ಕೆ ಆಯುರ್ವೇದದಲ್ಲಿ ಅಮೃತ ಫಲ ಎನ್ನುತ್ತಾರೆ. ಬಿಲ್ವದಿಂದ ವಾಸಿಯಾಗದ ಯಾವ ರೋಗವೂ ಇಲ್ಲ. ರೋಗಕ್ಕೆ ಯಾವ ಔಷಧಿಯೂ ಸಿಗದಿದ್ದರೆ ಬಿಲ್ವಪತ್ರೆಯನ್ನು ಉಪಯೋಗಿಸಬಹುದು ಎಂದು ಹೇಳಲಾಗುತ್ತದೆ.

ಗರ್ಭವತಿ ಸ್ತ್ರೀಯರು ಮಾತ್ರ ಬಿಲ್ವಪತ್ರೆಯನ್ನು ಸೇವಿಸಿದರೆ ಭ್ರೂಣವು ಮರಣ ಹೊಂದುವ ಸಾಧ್ಯತೆ ಇರುತ್ತದೆ ಎಂದು ಶಾಸ್ತ್ರ ಹಾಗೂ ವೈಜ್ಞಾನಿಕವಾಗಿ ಉಲ್ಲೇಖಿತವಾಗಿದೆ.

ನೈವೇದ್ಯ ಅರ್ಪಿಸುವಾಗ ತುಳಸಿ ಬಳಕೆ:

ತುಳಸಿ ಎಲೆ ಬಳಸಿ ನೈವೇದ್ಯ ಅರ್ಪಿಸುವುದು ಶುಭದಾಯಕವಾಗಿದೆ.

ತುಳಸಿ ಗಿಡ ವಾಯುಮಂಡಲದಲ್ಲಿನ ಸಾತ್ವಿಕ ಸಂಕೇತವಾಗಿದೆ. ತುಳಸಿಗೆ ಬ್ರಹ್ಮಾಂಡದಲ್ಲಿನ ಕೃಷ್ಣ ತತ್ವವನ್ನು ಸೆಳೆದುಕೊಳ್ಳುವ ಅಂಶವಿದೆ ಎಂದು ಹೇಳಲಾಗುತ್ತದೆ.

ತುಳಸಿ ಎಲೆಯನ್ನು ನೈವೇದ್ಯದಲ್ಲಿ ಬಳಸುವುದರಿಂದ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
.ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.