ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್‌ನ ಸ್ಪರ್ಧಾ ಮಾರ್ಗ ಕಾರ್ಯಕ್ರಮದಲ್ಲಿ ಶಾಸಕಿ ಅನ್ನಪೂರ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಣಿ ವಿ.ಜೆ. ಸಂಸದ ಇ. ತುಕಾರಾಂ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್ ಹ್ಯಾರಿಸ್ ಸುಮೇರ್ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಪ್ರಜಾವಾಣಿಯ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ ರಾಹುಲ್ ಬೆಳಗಲಿ ಭಾಗವಹಿಸಿದ್ದರು
ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್‌ನ ಸ್ಪರ್ಧಾ ಮಾರ್ಗ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಮಾಹಿತಿ ನೀಡಿದ ಸಾಧನಾ ಅಕಾಡೆಮಿಯ ಮಂಜುನಾಥ ಬಿ.
ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್‌ನ ಸ್ಪರ್ಧಾ ಮಾರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ನನ್ನ ಮನೆಗೆ ಮೊದಲು ಬಂದ ಪತ್ರಿಕೆ ‘ಪ್ರಜಾವಾಣಿ’. ಇದರ ಓದು ಜ್ಞಾನದ ಮೆಟ್ಟಿಲಾಗುತ್ತದೆ ಎಂದು ನನ್ನ ಪತ್ನಿ ಅನ್ನಪೂರ್ಣ ಹೇಳಿದ್ದರು. ನಾನೂ ಪತ್ರಿಕೆ ಓದಲು ಆರಂಭಿಸಿದೆ. ನಾಲ್ಕು ಬಾರಿ ಸೋಲಿಲ್ಲದ ಸರದಾರನಾಗಲು ಪತ್ರಿಕೆ ಓದುವಂತೆ ಪತ್ನಿ ಅನ್ನಪೂರ್ಣ ನೀಡಿದ ಸಲಹೆಯೂ ಒಂದು ಕಾರಣವಾಗಿತ್ತು.
-ಇ. ತುಕಾರಾಂ, ಬಳ್ಳಾರಿ ಸಂಸದ
ಪತ್ರಿಕೆಯಲ್ಲಿನ ಪ್ರಕಟಣೆಯಿಂದ ಕಾರ್ಯಕ್ರಮದ ಬಗ್ಗೆ ತಿಳಿಯಿತು. ಪರೀಕ್ಷೆಗೆ ತಮ್ಮ ತಯಾರಿ ಹೇಗಿತ್ತು ಎಂದು ವಿವರಿಸುವ ಮೂಲಕ ಅಧಿಕಾರಿಗಳು ನಮಗೆ ಪ್ರೇರಣೆ ಒದಗಿಸಿದ್ದಾರೆ.
-ವಿಶ್ವನಾಥ್, ಕಲಬುರಗಿ
ಅಧಿಕಾರಿಗಳು ತಮ್ಮ ಸಾಧನೆಯ ಹಿಂದಿನ ಪರಿಶ್ರಮ ವಿವರಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂದು ಮಂಜುನಾಥ್ ಅವರು ಹೇಳಿಕೊಟ್ಟದ್ದು ಇಷ್ಟವಾಯಿತು.
-ಸುಷ್ಮಿತಾ, ಬಳ್ಳಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ