ಗಡಿಭಾಗ ಅತ್ತಿಬೆಲೆಯಲ್ಲಿ 2023ರಲ್ಲಿ ನಡೆದ ಪಟಾಕಿ ದುರಂತ ಘಟನೆಯು ಈ ಭಾಗದ ಜನರಲ್ಲಿ ಇನ್ನೂ ಮಾಸಿಲ್ಲ. ಯುವಕರ ಬೆಂದ ದೇಹಗಳು ಕಣ್ಣಿನ ಮುಂದೆಯೇ ಇದೆ. ಈ ನಡುವೆ ಪಟಾಕಿಗಳನ್ನು ಬಳಕೆ ಮಾಡಬಾರದು ಎಂಬುದು ನಮ್ಮ ಸಂಕಲ್ಪ
ಸುನೀಲ್, ದಾಸನಪುರ
ಹಸಿರು ಪಟಾಕಿ ಬಳಕೆ ಕೇವಲ ಹೆಸರಿಗಷ್ಟೇ. ಆನೇಕಲ್ ತಾಲ್ಲೂಕು ಗಡಿ ಭಾಗದಲ್ಲಿರುವುದರಿಂದ ತಮಿಳುನಾಡಿ ಹೊಸೂರು, ಜೂಜುವಾಡಿ, ಕಗ್ಗನೂರುಗಳಲ್ಲಿ ಪಟಾಕಿ ಅಂಗಡಿಗಳು ತೆರೆದಿರುವುದರಿಂದ ಈ ಭಾಗದ ಜನರು ಅಲ್ಲಿ ಪಟಾಕಿ ಕೊಳ್ಳುತ್ತಾರೆ. ಹಸಿರು ಪಟಾಕಿಗಳ ಬಳಕಯೇ ಕಡಿಮೆ ಇದೆ