ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಭಾವೈಕ್ಯ ಸಾರಿದ ಯಕ್ಕುಂಡಿ ಉರುಸ್‌

ದರ್ಗಾ ಆವರಣದಲ್ಲಿ ಉರುಳುಸೇವೆ ಮಾಡಿ ಭಕ್ತಿ ಸಮರ್ಪಿಸಿದ ಹಿಂದೂ–ಮುಸ್ಲಿಮರು
Published 17 ಜೂನ್ 2023, 22:51 IST
Last Updated 17 ಜೂನ್ 2023, 22:51 IST
ಅಕ್ಷರ ಗಾತ್ರ

ಬೈಲಹೊಂಗಲ: ಸಮೀಪದ ಯಕ್ಕುಂಡಿಯಲ್ಲಿ ಮೂರು ದಿನಗಳ ಕಾಲ ಜರುಗಿದ ಪೀರ ದಿಲಾವರ ಘೋರಿ ಶಾಹವಾಲಿ ಬಾಬಾ ಉರುಸ್‌ ಶನಿವಾರ ರಾತ್ರಿ ಸಂಪನ್ನಗೊಂಡಿತು. ಮುಸ್ಲಿಮರಷ್ಟೇ ಅಲ್ಲದೆ, ಹಿಂದೂಗಳು ಭಾಗವಹಿಸಿ ಭಾವೈಕ್ಯತೆ ಮೆರೆದರು.

ಮಲಪ್ರಭಾ ನದಿ ದಡದಲ್ಲಿರುವ ಯಕ್ಕುಂಡಿ ತನ್ನದೇಯಾದ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆ ಹೊಂದಿದೆ. ‘ಯಜ್ಞಕುಂಡ’  ಎಂದೇ ಖ್ಯಾತಿ ಗಳಿಸಿದ ಈ ಊರಿಗೆ ಬಂದ ಪೀರ ದಿಲಾವರ ಘೋರಿ ಶಾಹವಲಿ ಬಾಬಾ ಅವರು ‘ಅಲ್ಲಾಹು’ವಿನ ಸಂದೇಶ ಸಾರುತ್ತ ಬಂದು ನೆಲೆಸಿದರು. ಅವರು ನಿಧನರಾದ ನಂತರ ಗ್ರಾಮಸ್ಥರು ದರ್ಗಾ ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.

ಈ ದರ್ಗಾದಲ್ಲಿ ಪ್ರತಿವರ್ಷ ಗ್ರಾಮಸ್ಥರು ಜಾತಿ ಭೇದ ಮರೆತು, ಉರುಸ್‌ ಆಚರಿಸುತ್ತ ಬಂದಿದ್ದಾರೆ. ಅಂತೆಯೇ ಈ ವರ್ಷವೂ ಉರುಸ್‌ ಸಡಗರದಿಂದ ಜರುಗಿತು. ಹಿಂದೂ–ಮುಸ್ಲಿಮರೆಲ್ಲ ಶ್ರದ್ಧೆ–ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಲವರು ಉರುಳುಸೇವೆ ಮಾಡಿ ಭಕ್ತಿ ಸಮರ್ಪಿಸಿದರು. ಅದರಲ್ಲೂ ಮೊದಲ ದಿನದಂದು ನಡೆದ ‘ಸಂದಲ್ ಮೆರವಣಿಗೆ’ ಕಣ್ಮನ ಸೆಳೆಯಿತು.

ಕುಮಾರೇಶ್ವರ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ, ಇಸ್ಲಾಂ ಧರ್ಮಗುರು ಮುರ್ಷಿದ್‌ ಪೀರಾ ಪೀರಜಾದೆ ಹಾಗೂ ಹಿರಿಯರಾದ ಮೋಹನರಾವ ದೇಸಾಯಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಕರ್ನಾಟಕ ಮಾತ್ರವಲ್ಲದೆ, ಗೋವಾ, ಮಹಾರಾಷ್ಟ್ರದಿಂದಲೂ ಭಕ್ತರ ದಂಡು ಹರಿದುಬಂದಿತ್ತು.

ಶಂಕರಗೌಡ ಪಾಟೀಲ, ಬಸವರಾಜ ಹೊಂಗಲ, ವಿನೋದರಾವ ದೇಸಾಯಿ, ಅಬ್ದುಲ್‌ಖಾದರ್‌ ಬಾರಿಗಿಡದ, ಮೋಹನ ಮೇಟಿ, ನಾಗಪ್ಪ ಹಿಟ್ಟಣಗಿ, ಬಂದೇನವಾಜ್‌ ಮುಲ್ಲಾ, ಮಕ್ತುಮಸಾ ಬಡೇಖಾನ್, ಇಸ್ಮಾಯಿಲ್ ಮುಜಾವರ ಮತ್ತಿತರರು ಉತ್ಸವದ ಯಶಸ್ಸಿಗೆ ಶ್ರಮಿಸಿದರು. ಕವ್ವಾಲಿ ಕಾರ್ಯಕ್ರಮ ಉರುಸ್‌ನ ಕಳೆ ಹೆಚ್ಚಿಸಿತು. ವಿವಿಧ ಸ್ಪರ್ಧೆಗಳು ಕುತೂಹಲ ಮೂಡಿಸಿದವು.

ಬೈಲಹೊಂಗಲ ಸಮೀಪದ ಯಕ್ಕುಂಡಿ ದರ್ಗಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಮರು ಶ್ರದ್ಧೆಯಿಂದ ಭಾಗವಹಿಸಿದ್ದರು
ಬೈಲಹೊಂಗಲ ಸಮೀಪದ ಯಕ್ಕುಂಡಿ ದರ್ಗಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಮರು ಶ್ರದ್ಧೆಯಿಂದ ಭಾಗವಹಿಸಿದ್ದರು
ಬೈಲಹೊಂಗಲ ಸಮೀಪದ ಯಕ್ಕುಂಡಿ ದರ್ಗಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಮರು ಶ್ರದ್ಧೆಯಿಂದ ಭಾಗವಹಿಸಿದ್ದರು
ಬೈಲಹೊಂಗಲ ಸಮೀಪದ ಯಕ್ಕುಂಡಿ ದರ್ಗಾದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಮರು ಶ್ರದ್ಧೆಯಿಂದ ಭಾಗವಹಿಸಿದ್ದರು
ನಮ್ಮೂರಿನಲ್ಲಿ ಜಾತಿ ಭೇದವಿಲ್ಲ. ಇಲ್ಲಿ ಯಾವುದೇ ಜಾತ್ರೆ ಉರುಸ್‌ ನಡೆದರೂ ಸರ್ವಧರ್ಮೀಯರು ಸೇರಿಕೊಂಡು ಆಚರಿಸುತ್ತೇವೆ. ಈ ಸಲವೂ ಸಂಭ್ರಮದಿಂದ ಉರುಸ್‌ ಆಚರಿಸಿದ್ದೇವೆ
–ಶಂಕರಗೌಡ ಪಾಟೀಲ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT