ಶುಕ್ರವಾರ, ಜೂನ್ 18, 2021
20 °C

ತರಕಾರಿ ಚೀಲಗಳಲ್ಲಿ ಮದ್ಯ ಕಳ್ಳಸಾಗಣೆ:ಇಬ್ಬರ ಬಂಧನ, 58 ಬಾಕ್ಸ್ ಮದ್ಯ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತರಕಾರಿ ಚೀಲಗಳಲ್ಲಿ ಭಾರಿ ಪ್ರಮಾಣದ ಮದ್ಯದ ಬಾಕ್ಸ್‌ಗಳನ್ನು ವಾಹನದಲ್ಲಿ ತಮಿಳುನಾಡಿಗೆ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸಿದ್ದಾರೆ.

ವಾಹನದ ಚಾಲಕ ತಮಿಳುನಾಡಿನ ತಿರುವಣ್ಣಾಮಲೈನ ರಾಮಕೃಷ್ಣನ್ (24) ಹಾಗೂ ರಾಜಕುಮಾರ್ (27) ಬಂಧಿತರು.

ಕೆ.ಆರ್. ಮಾರುಕಟ್ಟೆ ಬಳಿ ಹಾಕಲಾಗಿದ್ದ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಇವರು ಸಿಕ್ಕಿಬಿದ್ದಿದ್ದಾರೆ.

'ಒಟ್ಟು 58 ಬಾಕ್ಸ್‌ಗಳಲ್ಲಿ 509 ಲೀಟರ್‌ನಷ್ಟು ಮದ್ಯವನ್ನು ತರಕಾರಿ ಚೀಲಗಳಲ್ಲಿ ತುಂಬಿಸಿ, ಕಳ್ಳಸಾಗಣೆ ಮಾಡಲು ಮುಂದಾಗಿದ್ದರು. ತಪಾಸಣೆ ವೇಳೆ ಆರೋಪಿಗಳನ್ನು ಬಂಧಿಸಿ, ಮದ್ಯದ ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ' ಎಂದು ಪೊಲೀಸರು ತಿಳಿಸಿದರು.


ತರಕಾರಿ ತುಂಬಿದ್ದ ಚೀಲಗಳು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು