ಮೇಖ್ರಿ ಸರ್ಕಲ್‌ನಿಂದ ಪ್ಯಾಲೇಸ್ ಗುಟ್ಟಹಳ್ಳಿಗೆ ಸಾಗುವ ರಸ್ತೆಯಲ್ಲಿ ನಿಧಾನವಾಗಿ ಸಾಗಿದ ವಾಹನಗಳು
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಸಮಸ್ಯೆ ಬಗೆಹರಿಸುವುದು ಹೇಗೆ ಎಂದು ರಾಜಕಾರಣಿಗಳು ಯೋಚಿಸುತ್ತಿಲ್ಲ. ದುಡ್ಡು ಹೇಗೆ ದೋಚಬಹುದು ಎಂದು ಯೋಚಿಸುತ್ತಾರೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್‌ವರೆಗೆ ಮೇಲ್ಸೇತುವೆ ನಿರ್ಮಿಸಿದರೆ ಸಮಸ್ಯೆ ಕಡಿಮೆಯಾಗಲಿದೆ. ಆದರೆ, ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಇದು ಬೇಕಾಗಿಲ್ಲ. ಅವರು ಸುರಂಗ ಮಾರ್ಗ ಎಂದು ಜನರಿಗೆ ಉಪಯೋಗವಾಗದ ಯೋಜನೆಗಳ ಬಗ್ಗೆ ಯೋಚಿಸುತ್ತಾರೆ. ರಿಂಗ್ ರೋಡ್‌ನಿಂದಲೂ ವಾಹನಗಳು ಬರುತ್ತವೆ. ಬಸ್ ನಿಲ್ಲಲೂ ಜಾಗವಿಲ್ಲದಂತಾಗಿದೆ. ಹಿರಿಯ ನಾಗರಿಕರು ರಸ್ತೆ ದಾಟಲು ಪಾದಚಾರಿ ಮೇಲ್ಸೇತುವೆ ಎಲ್ಲಿದೆ ಎಂದು ಹುಡುಕಿಕೊಂಡು ಬರಬೇಕಿದೆ. ರಸ್ತೆ ದಾಟುವುದಕ್ಕಾಗಿ ನಾನು ಒಂದು ಕೀ. ಮೀ. ದೂರದಿಂದ ನಡೆದುಕೊಂಡು ಬಂದೆ. ಈಗಿನ ಸ್ಥಿತಿ ನೋಡಿದರೆ ದಶಕ ಕಳೆದರೂ ಸಮಸ್ಯೆಗಳು ಬಗೆಹರಿಯುವುದಿಲ್ಲ.
-ಸಿದ್ದಲಿಂಗಯ್ಯ, ಶಿವಶಂಕರ ಬ್ಲಾಕ್, ಹೆಬ್ಬಾಳ
ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ನಿತ್ಯ ದಟ್ಟಣೆ ಇರುತ್ತದೆ. ಸಂಜೆ 4ರಿಂದ ರಾತ್ರಿ 9ರವರೆಗೂ ಇದೇ ರೀತಿ ಇರುತ್ತದೆ. ಇಲ್ಲಿಂದ ಮುಂದಕ್ಕೆ ಇರುವುದು ಸರ್ಕಾರಿ ಜಾಗ. ಆದರೆ ಹಿಂದೆ ಎಂಜಿನಿಯರ್‌ಗಳು ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ರೂಪಿಸದೇ ಇದ್ದಿದ್ದರಿಂದ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಇಲ್ಲಿ ನೀರು ನಿಂತು ವಾಹನಗಳು ಸಂಚರಿಸುವುದೇ ಕಷ್ಟವಾಗಿ ಬಿಡುತ್ತದೆ. ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.