ಬೆಂಗಳೂರು: 'ಪ್ರವಾದಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವುದನ್ನು ಖಂಡಿಸುತ್ತೇವೆ. ಆದರೆ, ಕಿಡಿಗೇಡಿತನಕ್ಕೆ ಉತ್ತರವಾಗಿ ಹಿಂಸಾ ಕೃತ್ಯ ನಡೆಸಿರುವುದು ಖಂಡನೀಯ' ಎಂದು ಬಂಡಾಯ ಸಾಹಿತ್ಯ ಸಂಘಟನೆ ಹೇಳಿದೆ.

ಅವಹೇಳನಕಾರಿ ಪೋಸ್ಟ್ಗೆ ಪ್ರಜಾಸತ್ತಾತ್ಮಕ ಹಾಗೂ ಕಾನೂನಾತ್ಮಕ ವಿಧಾನದಲ್ಲಿ ಉತ್ತರಿಸಬೇಕೇ ಹೊರತು ಕಾನೂನನ್ನು ಕೈಗೆತ್ತಿಕೊಂಡು ಜೀವಹಾನಿ ಮತ್ತು ಸಾರ್ವಜನಿಕ ಆಸ್ತಿ ನಾಶ ಮಾಡುವುದನ್ನು ಯಾವ ಧರ್ಮವೂ ಒಪ್ಪುವುದಿಲ್ಲ. ಪ್ರವಾದಿಯವರನ್ನು ಒಳಗೊಂಡಂತೆ ಎಲ್ಲ ಧಾರ್ಮಿಕ ದಾರ್ಶನಿಕರು ಹಿಂಸೆಯ ವಿರೋಧಿಗಳೂ ಶಾಂತಿಪ್ರಿಯರೂ ಆಗಿದ್ದರೆಂಬ ಸತ್ಯವನ್ನು ಎಲ್ಲರೂ ಮನಗಾಣಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಹಿತ್ಯ ಬರಗೂರು ರಾಮಚಂದ್ರಪ್ಪ, ಡಾ.ಕೆ.ಮರುಳಸಿದ್ಧಪ್ಪ, ಜಸ್ಟೀಸ್ ಗೋಪಾಲಗೌಡ, ಬೋಳುವಾರು ಮಹಮದ್, ಜಸ್ಟೀಸ್ ನಾಗಮೋಹನದಾಸ್ ಸೇರಿದಂತೆ ಹಲವರು 'ಹಿಂಸೆ ಬೇಡ, ಶಾಂತಿ ಬೇಕು' ಎಂಬುದು ನಮ್ಮೆಲ್ಲರ ಆದರ್ಶವಾಗಬೇಕು ಎಂದು ಪ್ರಕಟಣೆಯ ಮೂಲಕ ಸಂದೇಶ ರವಾನಿಸಿದ್ದಾರೆ. ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಕೃತ್ಯವೆಸಗಿದ ಎಲ್ಲರ ಮೇಲೂ ಕ್ರಮಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

'ದುರುದ್ದೇಶದಿಂದ ಒಬ್ಬ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ, ಪ್ರಚೋದನಾತ್ಮಕ ಪೋಸ್ಟ್ ಹಾಕಿದರೆ; ಅದನ್ನು ನಿಭಾಯಿಸಲು ಸೈಬರ್ ಕಾನೂನು ಇದೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಬಹುದಿತ್ತು. ಆದರೆ, ಏಕಾಏಕಿ ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಿಳಿದು ಕಾನೂನನ್ನು ಕೈಗೆತ್ತಿಕೊಂಡು, ಭೀಕರ ವಾತಾವರಣ ಸೃಷ್ಟಿಸುವುದು ಖಂಡನೀಯ. ಶಾಂತಿ ಮತ್ತು ಸಹಬಾಳ್ವೆ ಪ್ರವಾದಿಯ ಮೂಲ ಮಂತ್ರ, ಅದನ್ನು ಸಮುದಾಯ ಪಾಲಿಸಬೇಕು' ಎಂದು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಪ್ರಕಟಣೆಯ ಮೂಲಕ ಆಗ್ರಹಿಸಿದೆ.

ಇನ್ನಷ್ಟು ಓದು...

ಬೆಂಗಳೂರು ಗಲಭೆ: ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಯಡಿಯೂರಪ್ಪ ಸೂಚನೆ

ಸಾರ್ವಜನಿಕ ಆಸ್ತಿ ಹಾಳು ಮಾಡಿದವರಿಂದಲೇ ನಷ್ಟ ವಸೂಲಿ: ಬಸವರಾಜ ಬೊಮ್ಮಾಯಿ

ಬೆಂಗಳೂರು ಗಲಭೆ | ಮೂವರು ಕೌನ್ಸಿಲರ್ಗಳು ಭಾಗಿ: ಸಚಿವ ಆರ್.ಅಶೋಕ

ರಸ್ತೆಯುದ್ದಕ್ಕೂ ಪೊಲೀಸ್ ಕಾವಲು: ನಿಯಂತ್ರಣದಲ್ಲಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ

ಬೆಂಗಳೂರು ಗಲಭೆ: ಶಿವಾಜಿನಗರದ ಸೈಯದ್ ಅಜ್ನಾನ್, ಮುಜಾಮಿಲ್ ಪಾಷ ಪ್ರಮುಖ ಆರೋಪಿ

ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಆದ್ಯತೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಡಿ.ಜೆ.ಹಳ್ಳಿ ಗಲಭೆ: ಸಿಎಂ ಭೇಟಿ ಮಾಡಿದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್

ಡಿ.ಜೆ.ಹಳ್ಳಿ ಗಲಭೆ | ಗುಂಡೇಟಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆ

ದಿಢೀರ್ ದಾಳಿ ನಡೆಸಲು ಅಷ್ಟೊಂದು ಕಲ್ಲು, ಪೆಟ್ರೋಲ್ ಎಲ್ಲಿಂದ ಬಂತು: ಕಟೀಲ್

ಡಿಜೆ ಹಳ್ಳಿ ಘಟನೆ| ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು: ಸುರೇಶ ಅಂಗಡಿ

ಡಿ.ಜೆ.ಹಳ್ಳಿ ಗಲಭೆ: ಘಟನೆಯ ಹೊಣೆ ಪೊಲೀಸರು ಹೊರಬೇಕು –ಡಿ.ಕೆ. ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.