ಗುರುವಾರ , ಜನವರಿ 23, 2020
28 °C

ನೈಸ್ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ‘ವಾಯುವಜ್ರ’ ಬಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನಕಪುರ ರಸ್ತೆಯ ನೈಸ್ ರಸ್ತೆ ಜಂಕ್ಷನ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸದಾಗಿ ವಾಯುವಜ್ರ ಬಸ್ ಸೇವೆ ಇದೇ 6ರಿಂದ ಆರಂಭವಾಗಲಿದೆ.

ತಲಘಟ್ಟಪುರ, ರಘುವನಹಳ್ಳಿ, ಕೋಣನಕುಂಟೆ ಕ್ರಾಸ್, ಜರಗನಹಳ್ಳಿ, ಸಾರಕ್ಕಿ ಸಿಗ್ನಲ್, ಜೆ.ಪಿ.ನಗರ 6ನೇ ಹಂತ, ಜಯನಗರ 4ನೇ ಬ್ಲಾಕ್, ಶಾಂತಿ ನಗರ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಮೇಕ್ರಿ ಸರ್ಕಲ್, ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಬಸ್ ಸಂಚರಿಸಲಿದೆ.

ಪ್ರತಿದಿನ ನೈಸ್ ರಸ್ತೆಯಿಂದ 6 ಟ್ರಿಪ್‌ಗಳು ಮತ್ತು ವಿಮಾನ ನಿಲ್ದಾಣದಿಂದ 4 ಟ್ರಿಪ್‌ಗಳು ಇರಲಿವೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು