ಬೆಂಗಳೂರು: ಒಳಮೀಸಲಾತಿ ಕಲ್ಪಿಸಲು ದತ್ತಾಂಶ ಸಂಗ್ರಹಕ್ಕೆ ನಡೆದಿರುವ ಸಮೀಕ್ಷೆಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಸರಾಸರಿ ಶೇ 95ರಷ್ಟು ಸಾಧನೆಯಾಗಿದ್ದರೆ, ಶೇ 50ರಷ್ಟು ಮಾತ್ರ ಗುರಿ ಸಾಧಿಸಿರುವ ಬೆಂಗಳೂರು ನಗರ ಸಮೀಕ್ಷೆಯಲ್ಲಿ ತೀರ ಹಿಂದುಳಿದಿದೆ. ಇನ್ನು ನಾಲ್ಕು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕಾದ ಸವಾಲು ಎದುರಾಗಿದೆ.

ಪರಿಶಿಷ್ಟ ಜಾತಿಯಲ್ಲಿ 101 ಸಮುದಾಯಗಳಿವೆ. ಆಯಾ ಸಮುದಾಯಗಳ ಜನಸಂಖ್ಯೆ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ ಸಹಿತ ವಿವಿಧ ಮಾಹಿತಿಗಳನ್ನು ನಿಖರವಾಗಿ ಸಂಗ್ರಹಿಸಲು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಧ್ಯಕ್ಷತೆಯ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಜವಾಬ್ದಾರಿ ನೀಡಲಾಗಿತ್ತು. ಮೇ 5ರಿಂದ ಸಮೀಕ್ಷೆ ಆರಂಭವಾಗಿತ್ತು. ಹಲವು ಬಾರಿ ವಿಸ್ತರಣೆಯಾಗಿ ಈಗ ಜೂನ್ 30ರವರೆಗೆ ಅವಕಾಶ ನೀಡಲಾಗಿದೆ.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.08 ಕೋಟಿ ಇದ್ದು, 2025ಕ್ಕೆ 1.49 ಕೋಟಿ ಆಗಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 2011ರ ಜನಗಣತಿ ಪ್ರಕಾರ ಎಸ್ಸಿ ಜನಸಂಖ್ಯೆ 9.60 ಲಕ್ಷ ಆಗಿದ್ದು, ಈಗ 13.62 ಲಕ್ಷ ಇದ್ದಾರೆ ಎಂದು ಅಂದಾಜು ಪ್ರಮಾಣವನ್ನು ಅಧಿಕಾರಿಗಳು ಇಟ್ಟುಕೊಂಡಿದ್ದಾರೆ. ಈ ಅಂದಾಜು ಜನಸಂಖ್ಯೆಯಲ್ಲಿ ಮಂಗಳವಾರ ಸಂಜೆಯವರೆಗೆ 6.77 ಲಕ್ಷ ಮಾತ್ರ ಗಣತಿಯಾಗಿದೆ.

ರಾಜ್ಯದಲ್ಲಿ 11 ಜಿಲ್ಲೆಗಳಲ್ಲಿ ಶೇ 100 ದಾಟಿ ಸಮೀಕ್ಷೆಯಾಗಿದೆ. 8 ಜಿಲ್ಲೆಗಳಲ್ಲಿ ಶೇ 95ರಿಂದ ಶೇ 99ರಷ್ಟು ಗಣತಿಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಶೇ 90ರಿಂದ ಶೇ 95ರಷ್ಟು ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ ಮಂಗಳವಾರದವರೆಗೆ ಶೇ 50ರಷ್ಟು ಸಮೀಕ್ಷೆಯಾಗಿದ್ದು, ಎರಡು ದಿನಗಳಲ್ಲಿ ಶೇ 2–3ರಷ್ಟು ಹೆಚ್ಚಳವಾಗಿರಬಹುದು ಎಂದು ಏಕಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಶೇ 92ರಷ್ಟು ಸಮೀಕ್ಷೆಯಾಗಿದೆ. ಈಗ ಸಮರೋಪಾದಿಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮತ್ತೆ ವಿಸ್ತರಣೆ ಇಲ್ಲ

ಸಮೀಕ್ಷೆಯ ಅವಧಿಯನ್ನು ಮತ್ತೆ ವಿಸ್ತರಣೆ ಮಾಡುವುದಿಲ್ಲ. ಇನ್ನು ಉಳಿದಿರುವ ನಾಲ್ಕು ದಿನಗಳಲ್ಲಿ ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಬುಧವಾರ 2300 ಮನೆಗಳಿಗೆ ಭೇಟಿ ನೀಡಲಾಗಿದೆ. ಗುರುವಾರವೂ ಇದೇ ಪ್ರಮಾಣದಲ್ಲಿ ಮನೆ ಭೇಟಿ ನಡೆದಿದೆ ಎಂದು ಏಕಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ತಿಳಿಸಿದರು. ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಅವರು ಆಯಾ ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆಯಲ್ಲಿ ನಮೂದಾಗಿರುವ ಸಾಧ್ಯತೆ ಇರುತ್ತದೆ. ಅಲ್ಲದೇ ಬಾಡಿಗೆ ಮನೆಯಲ್ಲಿ ಇರುವವರು ಸಾಮಾಜಿಕ ಅಸಮಾನತೆಯ ಕಾರಣಕ್ಕೆ ಜಾತಿ ಹೇಳಲು ಹಿಂಜರಿಯುವುದೂ ಕಾರಣ ಇರಬಹುದು. ಅಂಥವರೆಲ್ಲ ಆನ್ಲೈನ್ ಮೂಲಕ ಮಾಹಿತಿ ನೀಡಲು ಅವಕಾಶ ಇದೆ ಎಂದು ಹೇಳಿದರು.

ಮುಖಂಡರೇ ಭೇಟಿ

‘ಯಾವ ಪ್ರದೇಶದಲ್ಲಿ ಗಣತಿ ಕಡಿಮೆ ಇದೆ ಎಂದು ಗುರುತಿಸಿ ಅಲ್ಲಿಗೆ ಸಮುದಾಯದ ಮುಖಂಡರು ಜನಪ್ರತಿನಿಧಿಗಳೇ ನಾಲ್ಕು ದಿನ ಭೇಟಿ ನೀಡಲಿದ್ದಾರೆ. ನಾನೂ ಹೋಗುತ್ತಿದ್ದೇನೆ. ಪರಿಶಿಷ್ಟ ಜಾತಿಯ ಜನ ಇರುವ ಎಲ್ಲ ಕಾಲೊನಿಗಳಿಗೆ ಹೋಗಿ ಎಲ್ಲಿ ಸಮೀಕ್ಷೆ ಆಗಿಲ್ಲ ಎಂದು ನೋಡಿ ಸಮೀಕ್ಷೆ ನಡೆಸಲಾಗುವುದು. ಜೂನ್ 30ರ ಒಳಗೆ ಸಮೀಕ್ಷೆ ಕಾರ್ಯ ಮುಗಿಸಲಾಗುವುದು’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರಿ ಶಿಕ್ಷಕರಿಲ್ಲದಿರುವುದೂ ಕಾರಣ

ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ. ಆಯಾ ಊರಿನ ಮಾಹಿತಿ ಆ ಶಿಕ್ಷಕರಿಗೆ ಇರುತ್ತದೆ. ಅವರು ನಿಖರವಾಗಿ ಗಣತಿ ಮಾಡಿದ್ದಾರೆ. ಆದರೆ ಬೆಂಗಳೂರು ನಗರದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲಾಗಿಲ್ಲ. ಅಲ್ಲದೇ ಇಲ್ಲಿ ಯಾರು ಯಾವ ಸಮುದಾಯ ಎಂದು ಅಕ್ಕಪಕ್ಕದವರಿಗೇ ಗೊತ್ತಿರುವುದಿಲ್ಲ. ಇದರಿಂದ ಸಮೀಕ್ಷೆ ಪ್ರಮಾಣ ಕಡಿಮೆಯಾಗಿದೆ. ಮತ್ತೆ ಅವಧಿ ವಿಸ್ತರಣೆಗೆ ಅರ್ಥವಿಲ್ಲ. ಉಳಿದಿರುವ ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಗುವುದು ಎಂದು ಸಮುದಾಯದ ಮುಖಂಡ ಎಚ್. ಆಂಜನೇಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.