ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜಧಾನಿಯ ಮಹಾತ್ಮ ಗಾಂಧಿ ರಸ್ತೆಯಲ್ಲಿ ಪ್ರತಿವರ್ಷದಂತೆ ಜಮಾವಣೆಗೊಳ್ಳುವ ಜನರ ನಿಯಂತ್ರಣಕ್ಕೆ ಬಿಗಿ ಬಂದೋಬಸ್ತ್ ಮಾಡಿದ್ದ ಬೆಂಗಳೂರು ನಗರ ಪೊಲೀಸರ ನೇತೃತ್ವವನ್ನು ಸ್ವತಃ ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಅವರೇ ವಹಿಸಿದ್ದರು.

ರಾತ್ರಿ 10ರ ವರೆಗೂ ಎಂ.ಜಿ. ರಸ್ತೆ ಎಂದಿನಂತೆಯೇ ಇತ್ತು. ಆದರೆ, ನಂತರ ಜನರು ಬ್ರಿಗೇಡ್, ಚರ್ಚ್ ಸ್ಟ್ರೀಟ್ನತ್ತ ಬರಲಾರಂಭಿಸಿದರು. ಹೊಸ ವರ್ಷದ ಸಂಭ್ರಮಾಚರಣೆ ಕಳೆಗಟ್ಟಿತು. ರಾತ್ರಿ 11ರ ಸುಮಾರಿಗೆ ಕಪ್ಪು ಬಣ್ಣದ ಥಾರ್ನಲ್ಲಿ ಯುವಕರಿಬ್ಬರು ಬ್ರಿಗೇಡ್ ರಸ್ತೆಯ ಜಂಕ್ಷನ್ಗೆ ಬಂದರು.
.PHOTOS | ಹೊಸ ವರ್ಷದ ಸಂಭ್ರಮಾಚರಣೆ: ಕುಣಿದು ಕುಪ್ಪಳಿಸಿದ ಯುವಜನ.ಹೊಸ ವರ್ಷದ ಸಡಗರದಲ್ಲಿ ತೇಲಿದ ನಗರ: ಪಬ್, ಕ್ಲಬ್ಗಳಲ್ಲಿ ಕುಣಿದು–ನಲಿದು ಸಂಭ್ರಮ.
ಪರಿಶೀಲನೆ ಸಲುವಾಗಿ ಅಲ್ಲಿಗೆ ತೆರಳಿದ ಸೀಮಾಂತ್ ಕುಮಾರ್ ಸಿಂಗ್, ಕಾರಿನ ಕಿಟಕಿ ಗಾಜು ಇಳಿಸಲು ಸೂಚಿಸಿದರು. ದಾಖಲೆ ಕೇಳಿದರು. ಆಗ ಕಮಿಷನರ್ ಅವರನ್ನು ಕಂಡು ಗಾಬರಿಯಾದ ಯುವಕ, ದಾಖಲೆ ತೆಗೆಯಲು ತುಸು ತಡಬಡಾಯಿಸಿದ. ಆದರೆ, ಈ ಘಟನೆಗೆ ಸಾಕ್ಷಿಯಂತೆ ಚಾಲಕನ ಪಕ್ಕದಲ್ಲಿ ಕೂತಿದ್ದ ಯುವಕ, ಘಟನೆ ಅರಗಿಸಿಕೊಳ್ಳುವ ಮೊದಲೇ ಕಮಿಷನರ್ ಕಜ್ಜಾಯದ ಬಿಸಿ ತೋರಿಸಿದ್ದರು.

ಪೆಟ್ಟು ತಿಂದು ಪೆಚ್ಚಾದ ಯುವಕ, ‘ನನಗೆ ಹೊಡೆದಿದ್ದಾದರೂ ಏಕೆ?’ ಎಂಬ ಪ್ರಶ್ನೆಯನ್ನು ಕೇಳುತ್ತಲೇ ಇದ್ದ.

ಘಟನೆಗೆ ಸಾಕ್ಷಿಯಾದ ಪತ್ರಕರ್ತರ ಬಳಿ ತನ್ನ ಅಳಲು ತೋಡಿಕೊಂಡ ಆತ, ‘ನನಗೆ ಏಕೆ ಹೊಡೆದರು ಎಂದು ಈಗಲೂ ಗೊತ್ತಾಗುತ್ತಿಲ್ಲ. ನಾವು ಎಂ.ಜಿ. ರಸ್ತೆಗೆ ಬರ್ಬಾರ್ದಾ?’ ಎಂದು ಮರು ಪ್ರಶ್ನೆಯನ್ನಿತ್ತು, ಮತ್ತೆ ಮಂಕಾದರು.

ಮತ್ತೊಂದೆಡೆ ಯುವಕನೊಬ್ಬನ ಬ್ಯಾಗ್ ಪರಿಶೀಲಿಸಿದ ಸೀಮಾಂತ್ ಕುಮಾರ್ ಸಿಂಗ್, ಆತನ ಬಳಿ ಇದ್ದ ಕ್ಯಾಮೆರಾ ನೋಡಿ, ‘ಇದನ್ನೇಕೆ ತಂದಿದ್ದೀಯಾ? ಎಂದು ಗದರಿ, ಆತನನ್ನು ಸಂಭ್ರಮದಿಂದಲೇ ದೂರವಿಡಲು ಸಿಬ್ಬಂದಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.