ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಇದೇ 10ರಿಂದ 19ರವರೆಗೆ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್ನಲ್ಲಿ ‘ದಿ ಇಂಡಿಯನ್ ಆರ್ಟಿಸನ್ಸ್ ಹಾಟ್’ ಶೀರ್ಷಿಕೆಯಡಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿದೆ.

ದೀಪಾವಳಿ ಪ್ರಯುಕ್ತ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕೈಮಗ್ಗ, ಹಸ್ತಶಿಲ್ಪ ಮತ್ತು ಪರಂಪರಾತ್ಮಕ ಕಲೆಗಳನ್ನು ಈ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ದೇಶದ ವಿವಿಧ ಭಾಗಗಳ ಕಲಾವಿದರು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು, ತಾವು ತಯಾರಿಸಿದ ಕಲಾತ್ಮಕ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ದೇಶೀಯ ಉತ್ಸನ್ನಗಳನ್ನು ಪ್ರೋತ್ಸಾಹಿಸುವುದು ಹಾಗೂ ಹೊಳ ಪೀಳಿಗೆಗೆ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪರಿಚಯಿಸುವುದು ಈ ಪ್ರದರ್ಶನದ ಆಶಯವಾಗಿದೆ.

ಪ್ರಮುಖವಾಗಿ ಚನ್ನಪಟ್ಟಣದ ಆಟಿಕೆಗಳು, ಉತ್ತರ ಪ್ರದೇಶದ ಖುರ್ಜಾದ ಮಣ್ಣಿನ ಪಾತ್ರೆ ಹಾಗೂ ಆಲಂಕಾರಿಕ ವಸ್ತುಗಳು, ಒಡಿಶಾದ ಡೋಕ್ರಾ ಕಲೆ ಹಾಗೂ ಮರದ ಆಟಿಕೆಗಳು, ವರ್ಣಚಿತ್ರಗಳು, ಆಭರಣಗಳು, ಮನೆ ಅಲಂಕಾರಿಕ ವಸ್ತುಗಳು ಸೇರಿದಂತೆ ಹಲವು ವೈವಿಧ್ಯ ಸಾಂಪ್ರದಾಯಿಕ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.

ತಮಿಳುನಾಡು, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸೇರಿ ದೇಶದ ವಿವಿಧ ರಾಜ್ಯಗಳಿಂದ ಕಲಾವಿದರು ತಾವು ತಯಾರಿಸಿದ ಉತ್ಪನ್ನಗಳನ್ನು ತರಲಿದ್ದಾರೆ. ವಿವಿಧ ಬಗೆಯ ಸೀರೆಗಳು, ಪಿಠೋಪಕರಣ, ಬ್ಯಾಗ್ಗಳು, ಖಾದಿ ಬಟ್ಟೆಗಳೂ ದೊರೆಯಲಿವೆ.

10 ದಿನಗಳ ಈ ಪ್ರದರ್ಶನದಲ್ಲಿ ವಾರಾಂತ್ಯ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಇಡೀ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್ ಅನ್ನು ದೀಪಾವಳಿ ವಿಷಯಾಧರಿಸಿ ಅಲಂಕಾರ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.