ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru IT Raid: ಬಿಬಿಎಂಪಿ ಗುತ್ತಿಗೆದಾರನ ಮಗಳ ಮನೆಯಲ್ಲಿ ₹42 ಕೋಟಿ ಪತ್ತೆ

ಗುತ್ತಿಗೆದಾರರ ಮೇಲೆ ಮುಂದುವರಿದ ಐಟಿ ದಾಳಿ
Published 13 ಅಕ್ಟೋಬರ್ 2023, 4:17 IST
Last Updated 13 ಅಕ್ಟೋಬರ್ 2023, 4:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎರಡು ಗುತ್ತಿಗೆ ಕಂಪನಿಗಳ ಮೇಲೆ ಗುರುವಾರ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು, ಶುಕ್ರವಾರವೂ ತಮ್ಮ ದಾಳಿ ಮುಂದುವರಿಸಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರರೊಬ್ಬರ ಮನೆ ಹಾಗೂ ಅವರ ಮಗಳ‌ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇವರ ಮನೆಯಲ್ಲಿ ಗುರುವಾರ ತಡರಾತ್ರಿಯಿಂದ‌ ಶೋಧ ನಡೆದಿದೆ.

ಬಿಬಿಎಂಪಿ ಗುತ್ತಿಗೆದಾರನ ಮಗಳ ಮನೆಯಲ್ಲಿ ₹42 ಕೋಟಿ ನಗದು ಪತ್ತೆಯಾಗಿರುವುದಾಗಿ ಗೊತ್ತಾಗಿದೆ. ಶುಕ್ರವಾರ ಬೆಳಿಗ್ಗೆಯೂ ಶೋಧ ಮುಂದಿವರಿದಿದೆ.

23 ಬಾಕ್ಸ್‌ಗಳಲ್ಲಿ ಹಣ ತುಂಬಿಡಲಾಗಿತ್ತು. ತಮಿಳುನಾಡಿಗೆ ಹಣ ಸಾಗಿಸಲು ತಯಾರಿ ನಡೆದಿತ್ತು. ಇದರ ಜೊತೆಯಲ್ಲೇ, ಮಾಜಿ ಕಾರ್ಪೊರೇಟರ್ ಮನೆ ಮೇಲೂ ಐಟಿ ದಾಳಿ ನಡೆದಿದೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT