ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವೀಕ್ಷಣಾಲಯ: 76 ಹುದ್ದೆ– ನಿಯೋಜನೆ ಮೇರೆಗೆ ಭರ್ತಿಗೆ ಅವಕಾಶ

Published 2 ಜನವರಿ 2024, 16:05 IST
Last Updated 2 ಜನವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿರುವ 19 ವೀಕ್ಷಣಾಲಯ ಮತ್ತು ‘ಪ್ಲೇಸ್‌ ಆ ಸೇಫ್ಟಿ’ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು 76 ಹುದ್ದೆಗಳನ್ನು ಪೊಲೀಸ್‌ ಇಲಾಖೆಯಿಂದ ನಿಯೋಜನೆ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರ ಆದೇಶಿಸಿದೆ. ಆರ್ಥಿಕ ಇಲಾಖೆ ಸಹಮತಿ ಪಡೆದು ಹುದ್ದೆಗಳನ್ನು ಸೃಜಿಸಿ ಆದೇಶಿಸಿದೆ.

ಪ್ರತಿಸಂಸ್ಥೆಗೆ 4 ಪೊಲೀಸ್‌ ಸಿಬ್ಬಂದಿಯಂತೆ ಒಟ್ಟು 76 ಹುದ್ದೆಗಳ ಅಗತ್ಯವಿದೆ. ಈಗಾಗಲೇ ಮಂಜೂರಾಗಿರುವ 47 ಹುದ್ದೆಗಳೊಂದಿಗೆ ಹೆಚ್ಚುವರಿಯಾಗಿ 29 ಭದ್ರತಾ ಸಿಬ್ಬಂದಿ ಹುದ್ದೆಗಳನ್ನು ಸೃಜಿಸಲಾಗಿದೆ. ಈ ಹುದ್ದೆಗಳನ್ನು ಪೊಲೀಸ್‌ ಇಲಾಖೆಯಿಂದ ನಿಯೋಜನೆಗಳ ಮೂಲಕ ಭರ್ತಿ ಮಾಡುವಂತೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT