ಅಂತಿಮ ಹಂತದಲ್ಲಿರುವ ಸಾಫ್ಟ್ವೇರ್ ಅಭಿವೃದ್ಧಿ ಪ್ರಕ್ರಿಯೆ | ಆಗಸ್ಟ್ 15ರಿಂದ ಸಾರ್ವಜನಿಕರ ಬಳಕೆಗೆ ಲಭ್ಯ | ಸುಮಾರು 8 ಲಕ್ಷ ಆಸ್ತಿಗಳಿಗೆ ಅನುಕೂಲ

ಬೆಂಗಳೂರು: ‘ಬಿ’ ಖಾತಾ ಹೊಂದಿರುವ ಅಥವಾ ಯಾವುದೇ ಖಾತಾ ಹೊಂದಿರದ ನಿವೇಶನಗಳಿಗೆ ಆನ್ಲೈನ್ನಲ್ಲೇ ‘ಎ’ ಖಾತಾ, ‘ಇ’ ಖಾತಾ ನೀಡುವ ‘ಸಮಗ್ರ ತಂತ್ರಾಂಶ’ವನ್ನು ಬಿಬಿಎಂಪಿ ಅಳವಡಿಸಿಕೊಳ್ಳಲಿದೆ.

ಕಾವೇರಿ ತಂತ್ರಾಂಶದೊಂದಿಗೆ ಮಾಹಿತಿ ಕಲೆಹಾಕುವುದು ಸೇರಿದಂತೆ ಕಂದಾಯ ಇಲಾಖೆ, ಬಿಬಿಎಂಪಿಯ ಕಂದಾಯ ವಿಭಾಗ, ನಗರ ಯೋಜನೆಯ ಅಧಿಕಾರಿಗಳು ‘ಸಮಗ್ರ ತಂತ್ರಾಂಶ’ ಮೂಲಕವೇ ಎಲ್ಲ ರೀತಿಯ
ಅನುಮೋದನೆಯನ್ನು ನೀಡಲಿದ್ದಾರೆ. ನಿವೇಶನ ‘ಎ’ ಖಾತಾವಾಗಿ ಕಾನೂನು ಬದ್ಧವಾಗಲು ಪಾವತಿಸಬೇಕಾದ ಶುಲ್ಕದ ಲೆಕ್ಕಾಚಾರವೂ ಆನ್ಲೈನ್ನಲ್ಲೇ ಆಗಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024 (ಜಿಬಿಜಿಎ) ಜಾರಿಯಾಗಿದ್ದು, ಅದರಂತೆ ಎಲ್ಲ ಕಟ್ಟಡಗಳು ನಕ್ಷೆ ಹಾಗೂ ಪರವಾನಗಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಅದಕ್ಕೆ ಅನುಗುಣವಾಗಿ, ಎಲ್ಲ ಆಸ್ತಿಗಳಿಗೂ ‘ಎ’ ಖಾತಾ ನೀಡಿ ಕಾನೂನುಬದ್ಧಗೊಳಿಸಲು ಸರ್ಕಾರ ನಿರ್ಧರಿಸಿದೆ. ಕಂದಾಯ ಇಲಾಖೆಯಿಂದ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಬೇಕಿದೆ. ನಂತರ ‘ರೆವಿನ್ಯೂ ಸೈಟ್’ (ಕಂದಾಯ ನಿವೇಶನ) ಅಥವಾ ಬಡಾವಣೆಗಳಲ್ಲಿರುವ ಎಲ್ಲ ಆಸ್ತಿಗಳಿಗೂ ಖಾತಾ ಲಭ್ಯವಾಗಲಿದೆ.

‘ಗ್ರೇಟರ್ ಬೆಂಗಳೂರು ಪ್ರದೇಶ’ದಲ್ಲಿರುವ ಎಲ್ಲ ನಿವೇಶನಗಳಿಗೂ ಒಂದೇ ತಂತ್ರಾಂಶದ ಮೂಲಕ ಖಾತೆಗಳನ್ನು ನೀಡಲು ‘ಸಮಗ್ರ ತಂತ್ರಾಂಶ’ ಸಿದ್ಧವಾಗುತ್ತಿದೆ. ಎಲ್ಲ ದಾಖಲೆಗಳೂ ಡಿಜಿಟಲ್ ರೂಪದಲ್ಲೇ ದಾಖಲಾಗುತ್ತವೆ. ಹೀಗಾಗಿ, ಬಿಬಿಎಂಪಿ ಕಚೇರಿಗಳಿಗೆ ಮಾಲೀಕರು ಆಗಾಗ್ಗೆ ಅಲೆಯುವಂತಿಲ್ಲ.

ಏಕ ನಿವೇಶನವಾಗಿ ಪರಿಗಣನೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನಗಳು ಅಥವಾ ಬಡಾವಣೆಗಳಿಗೆ ಅಭಿವೃದ್ಧಿ ನಕ್ಷೆ ನೀಡುವ ಅಧಿಕಾರವನ್ನು ಬಿಡಿಎಯಿಂದ ಬಿಬಿಎಂಪಿಗೆ ಪ್ರತ್ಯಾಯೋಜಿಸಲಾಗಿದೆ. ಹೀಗಾಗಿ, ನಿವೇಶನಗಳನ್ನು ‘ಏಕ ನಿವೇಶನ’ ಎಂದು ಪರಿಗಣಿಸಿ, ಅಭಿವೃದ್ಧಿ ನಕ್ಷೆಯನ್ನು ಬಿಬಿಎಂಪಿಯೇ ನೀಡುತ್ತದೆ. ಇದಕ್ಕಾಗಿ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಸೆಕ್ಷನ್ 13–ಇಗೆ ತಿದ್ದುಪಡಿ ತಂದು, ಪರಿಷ್ಕೃತ ಮಾಸ್ಟರ್ ಪ್ಲಾನ್–2015ರ ವಲಯ ನಿಯಮಗಳನ್ನು ಬದಲಾಯಿಸಿ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ಈ ಅಧಿಸೂಚನೆಯಂತೆ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ 20x30 ಅಡಿ ನಿವೇಶನದಿಂದ ಎರಡೂವರೆ ಎಕರೆವರೆಗಿನ ಏಕ ನಿವೇಶನಗಳಿಗೆ ರಸ್ತೆ, ಉದ್ಯಾನ ಸೇರಿದಂತೆ ಯೋಜನಾಬದ್ಧವಾದ ಪ್ರದೇಶಗಳನ್ನು ನಿಗದಿಪಡಿಸಿ, ಬಿಬಿಎಂಪಿಯೇ ಅಭಿವೃದ್ಧಿ ನಕ್ಷೆಯನ್ನು ನೀಡುತ್ತದೆ. ಅಭಿವೃದ್ಧಿ ನಕ್ಷೆ, ಖಾತಾ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ‘ಸಮಗ್ರ ತಂತ್ರಾಂಶ’ದಲ್ಲೇ ನಡೆಯುತ್ತವೆ. ಆಸ್ತಿಯ ಎಲ್ಲ ದಾಖಲೆಗಳನ್ನು ಒಂದು ಬಾರಿ ಅಪ್ಲೋಡ್ ಮಾಡಿದರೆ, ಅಭಿವೃದ್ಧಿ ನಕ್ಷೆ, ಖಾತಾ ಎಲ್ಲವೂ ಲಭ್ಯವಾಗುತ್ತದೆ ಎಂದು ಬಿಬಿಎಂಪಿ ನಗರ ಯೋಜನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

30 ದಿನಗಳಲ್ಲಿ ಖಾತಾ ಲಭ್ಯ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಅನುಮೋದನೆಗೆ ಬಳಸಲಾಗುತ್ತಿ ರುವ ‘ನಂಬಿಕೆ ನಕ್ಷೆ’ ತಂತ್ರಾಂಶವನ್ನು ವಿಸ್ತರಿಸಿ, ಖಾತಾ ನೀಡುವ ‘ಸಮಗ್ರ ತಂತ್ರಾಂಶ’ವನ್ನು ತಯಾರಿಸಲಾಗುತ್ತಿದೆ. ನಿವೇಶನಗಳಿಗೆ ಖಾತಾ ಪಡೆಯಲು ಬಯಸುವ ಮಾಲೀಕರು, ಬಿಬಿಎಂಪಿ ದೃಢೀಕರಿಸಿರುವ ಆರ್ಕಿಟೆಕ್ಟ್ ಅಥವಾ ಎಂಜಿನಿಯರ್ಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಆಸ್ತಿಯ ಮಾಲೀಕತ್ವದ ದಾಖಲೆಗಳು, ಚಿತ್ರ, ನಿವೇಶನದ ನಾಲ್ಕು ಬದಿಯ ಅಕ್ಷಾಂಶ, ರೇಖಾಂಶಗಳ ಮಾಹಿತಿ, ಖಾತಾ ಪಡೆದುಕೊಂಡಿದ್ದರೆ ಅದರ ಪ್ರತಿ, ಇ–ಪಿಐಡಿ ಇದ್ದರೆ ಅದನ್ನು ನಮೂದಿಸಿ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.

ಎಲ್ಲ ದಾಖಲೆಗಳು ಆನ್ಲೈನ್ನಲ್ಲೇ ಪರಿಶೀಲನೆಯಾಗುವುದರಿಂದ ಹಂತಹಂತವಾಗಿ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಯಾವುದಕ್ಕೆ ಎಷ್ಟು ಶುಲ್ಕ (ಮಾರ್ಗಸೂಚಿ ದರದ ಶೇ 5ರಷ್ಟು/ಅಭಿವೃದ್ಧಿ ಶುಲ್ಕ) ಸೇರಿದಂತೆ ಎಲ್ಲದರ ಲೆಕ್ಕವೂ ಸ್ವಯಂಚಾಲಿತವಾಗಿ ಆಗುತ್ತದೆ. ಎಲ್ಲ ದಾಖಲೆಗಳು ಸರಿಯಾಗಿದ್ದರೆ 30 ದಿನಗಳಲ್ಲಿ ‘ಎ’ ಖಾತಾದ ಜೊತೆಗೆ ಅಂತಿಮ ಇ–ಖಾತಾವೂ ಲಭ್ಯವಾಗುತ್ತದೆ. ಇ– ಖಾತಾ ದೊರೆತ ಮೇಲೆ ಕಟ್ಟಡ ನಕ್ಷೆಗೆ ಇಪಿಐಡಿಯನ್ನು ನಮೂದಿಸಿ ಅರ್ಜಿ ಸಲ್ಲಿಸಿದಾಗ ಕೆಲವೇ ಕೆಲವು ದಾಖಲೆಗಳನ್ನು ಸಲ್ಲಿಸಿದರೆ ಸಾಕಾಗುತ್ತದೆ. ‘ನಂಬಿಕೆ ನಕ್ಷೆ’ಯೂ ದೊರೆಯುತ್ತದೆ.

ಏನಾಗಲಿದೆ ಅಕ್ರಮ ‘ಎ’ ಖಾತಾ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅಭಿವೃದ್ಧಿ ನಕ್ಷೆ ಮಂಜೂರಾಗದೆ, ಭೂ ಪರಿವರ್ತನೆಗೊಳ್ಳದೆ ಅಕ್ರಮವಾಗಿ ‘ಎ’ ಖಾತಾ ಪಡೆದಿರುವ ನಿವೇಶನಗಳಿಗೆ ಕಾನೂನುಬದ್ಧ ‘ಎ’ ಖಾತಾ ಪಡೆದುಕೊಳ್ಳಲು ಅವಕಾಶವಿದೆ.

‘ಬಿ’ ಖಾತಾಗೆ ಅರ್ಹವಾಗಿರುವ ಆಸ್ತಿಗಳ ಮಾಲೀಕರಿಂದ ಅಕ್ರಮವಾಗಿ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು, ‘ಐಎಫ್ಎಂಎಸ್’ ತಂತ್ರಾಂಶದ ‘ಆರ್ ಕೋಡ್ 130’ ಬಳಸಿ 45 ಸಾವಿರಕ್ಕೂ ಹೆಚ್ಚು ‘ಎ’ ಖಾತಾವನ್ನು ನಿಯಮಬಾಹಿರವಾಗಿ ನೀಡಿರುವುದು 2023ರಲ್ಲಿ ತನಿಖೆಯಿಂದ ಪತ್ತೆಯಾಗಿತ್ತು. ಅವುಗಳೆಲ್ಲವನ್ನೂ ಈಗ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗು ತ್ತದೆ. ಅಕ್ರಮ ಎಂದೂ ನಮೂದಿಸಲಾಗುತ್ತದೆ’ ಎಂಬುದಾಗಿ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದರು.

‘ಅಕ್ರಮ ‘ಎ’ ಖಾತಾದವರೂ ಈಗ ಕಾನೂನುಬದ್ಧ ‘ಎ’ ಖಾತಾ ಪಡೆದುಕೊಂಡರೆ ಅವರ ಆಸ್ತಿ ಮಾಲೀಕತ್ವ ದೃಢೀಕರಣವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.