ಕೃಷಿ ಯೋಗ್ಯ ಜಮೀನು ಸ್ವಾಧೀನ ಮಾಡುತ್ತಾ ಹೋದರೆ ಆಹಾರಕ್ಕೆ ತುಕ್ಕು ಬರಬಹುದು. 2013ರಲ್ಲಿ ಯುಪಿಎ ಸರ್ಕಾರ ಜಾರಿಗೊಳಿಸಿದ ಮಾಲೀಕರ ಅನುಮತಿ ಪಡೆದು ಸ್ವಾಧೀನ ಮಾಡಿಕೊಳ್ಳುವ ಕಾನೂನನ್ನು ಜಾರಿಗೆ ತರಬೇಕು.
-ಕೆ.ನಾರಾಯಣ ಗೌಡ, ವಿಶ್ರಾಂತ ಕುಲಪತಿ
ಭೂಸ್ವಾಧೀನಕ್ಕಾಗಿ ಒಪ್ಪಂದ ಮಾಡಿಕೊಂಡರೂ ಅದು ನಿಗದಿತ ಉದ್ದೇಶ ಈಡೇರಿಸುವುದಿಲ್ಲ. ನೆರೆಯ ಆಂಧ್ರಪ್ರದೇಶದಂತೆ ನಮ್ಮಲ್ಲೂ ಬಂಜರು ಭೂಮಿಯನ್ನು ಕೈಗಾರಿಕೆಗಳಿಗೆ ನೀಡುವುದು ಹೆಚ್ಚಬೇಕು.
-ಎಸ್.ಜಿ.ಸಿದ್ದರಾಮಯ್ಯ ಸಾಹಿತಿ
ಕೃಷಿ ಕೈಗಾರಿಕೆ ಹಾಗೂ ಭೂಸ್ವಾಧೀನ ನೀತಿಗಳನ್ನು ಒಂದಕ್ಕೊಂದು ಪೂರಕ ಎನ್ನುವಂತೆ ರೂಪಿಸಿದರೆ ಮಾತ್ರ ಉಳಿಗಾಲವಿದೆ. ಸರ್ಕಾರವೇ ತಪ್ಪು ಹೆಜ್ಜೆ ಇಟ್ಟಾಗ ಪ್ರಶ್ನಿಸಿ ಸರಿಯಾದ ನೀತಿ ರೂಪಿಸುವಂತೆ ಒತ್ತಾಯಿಸಬೇಕು
-ಬಡಗಲಪುರ ನಾಗೇಂದ್ರ, ರೈತ ಸಂಘದ ನಾಯಕ
ಇಸ್ರೇಲ್‌ನಂತೆ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಉತ್ಪಾದನೆ ಹೆಚ್ಚಿಸುವ ಪ್ರಯತ್ನ ಆಗಬೇಕು. ಕೈಗಾರಿಕೆ ಹಾಗೂ ಕೃಷಿ ಸಮಾನಾಂತರವಾಗಿ ಬೆಳೆಯಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಬೇಕು.