ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಲಾಸ್ಯವರ್ಧನ ಟ್ರಸ್ಟ್‌ನಿಂದ ವಿನೂತನ ನೃತ್ಯ ಕಾರ್ಯಕ್ರಮ

Last Updated 17 ಜೂನ್ 2022, 12:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಲ್ಲೇಶ್ವರದ ಲಾಸ್ಯವರ್ಧನ ಟ್ರಸ್ಟ್ಆಯೋಜಿಸಿರುವ ವಿನೂತನ ನೃತ್ಯ (ವರ್ಣ) ಕಾರ್ಯಕ್ರಮ ಸರಣಿಯ ಮೊದಲ ಕಂತು ಇತ್ತೀಚೆಗೆ ನಡೆಯಿತು.

ಮೊದಲ ಕಂತಿನಲ್ಲಿ ಮೂವರು ಕಿರಿಯ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು.

ಆರ್. ಪ್ರವರ್ಧನ್ ಅವರ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನೃತ್ಯ ವಿದುಷಿ ಬಿ.ಕೆ.ವಸಂತಲಕ್ಷ್ಮಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ‘ವರ್ಣ’ದ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಕೊಟ್ಟರು.

ಮೊದಲು ನರ್ತಿಸಿದ ಅನುಶ್ರೀ (ಗುರು: ದೀಪಾಭಟ್) ‘ದೀನ ಬಂಧು ದೇವ’ ವರ್ಣವನ್ನು ಆಯ್ದು ಸುಲಲಿತವಾಗಿ ನರ್ತಿಸಿದರು. ಕೆ.ಸ್ವಾತಿ (ಗುರು: ಪೂರ್ಣಿಮಾ ಗುರುರಾಜ್) ತಮ್ಮ ‘ಮೋಹಮಾನ’ ವರ್ಣವನ್ನು ಪ್ರತಿಭಾಪೂರ್ಣವಾಗಿ ಮಾಡಿದರು. ಕೊನೆಯದಾಗಿ ನರ್ತಿಸಿದ ಎ.ವಿ.ವೈಶಾಲಿ (ಗುರು: ಡಾ. ದ್ವರಿತ ವಿಶ್ವನಾಥ್) ಮಾಯೆ’ ನರ್ತನ ಪ್ರದರ್ಶಿಸಿದರು.

‘ಲಾಸ್ಯವರ್ಧನ ಟ್ರಸ್ಟ್’ ಕಳೆದ 12 ವರ್ಷಗಳಿಂದ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ನೃತ್ಯ ಶಿಕ್ಷಣ, ನೃತ್ಯ ಸಂಯೋಜನೆ, ಸ್ಪರ್ಧೆ, ಸಂಗೀತ, ನಾಟಕಗಳಲ್ಲದೆ ನವರಾತ್ರಿ, ರಾಮನವಮಿ, ಉತ್ಸವಗಳನ್ನೂ ಆಚರಿಸುತ್ತಾ ಬಂದಿದೆ. ಡಾ. ಮಾಲಿನಿ ರವಿಶಂಕರ್ ಅವರ ನೇತೃತ್ವದಲ್ಲಿ ಅನೇಕ ಆಸಕ್ತರಿಗೆ ನೃತ್ಯ ಶಿಕ್ಷಣವನ್ನೂ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT