ಎಲ್ಲಿಂದಲೋ ಬರುವ ಆಟೊಗಳು. .
‘ಆಟೊಗಳಿಗೂ ವೇಶ್ಯಾವಾಟಿಕೆ ನಡೆಸುವವರಿಗೂ ಕೊಂಡಿ ಇರುತ್ತದೆ. ಇದಕ್ಕೆ ಸಂಬಂಧಿಸಿದ ಆಟೊಗಳು ಎಲ್ಲಿಂದ ಬರುತ್ತವೆ ಎಂದು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ. ಆದರೆ, ಗಿರಾಕಿಗಳು ಸಿಕ್ಕಿದ ಕೂಡಲೇ ಯಾವುದೇ ಕರೆ ಮಾಡದೆಯೇ ಆಟೊ ಚಾಲಕರಿಗೆ ಸಿಗ್ನಲ್ ಹೋಗುತ್ತದೆ. ಮೇಲ್ಸೇತುವೆಯಿಂದ ರಸ್ತೆಗೆ ಇಳಿಯುವ ಹೊತ್ತಿಗೆ, ಇಲ್ಲವೇ ಬಸ್ ನಿಲ್ದಾಣದಿಂದ ಹೊರ ಬರುವ ಹೊತ್ತಿಗೆ ಸರಿಯಾಗಿ ಆಟೊ ಬಂದು ನಿಲ್ಲುತ್ತದೆ. ಹತ್ತಿಕೊಂಡು ಹೋಗುತ್ತಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.