ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೊಲೀಸರ ಸೇವೆ ಶ್ಲಾಘನೀಯ: ಉಮೇಶ್ ಬಣಕಾರ್

Published : 29 ಸೆಪ್ಟೆಂಬರ್ 2024, 19:15 IST
Last Updated : 29 ಸೆಪ್ಟೆಂಬರ್ 2024, 19:15 IST
ಫಾಲೋ ಮಾಡಿ
Comments

ರಾಜರಾಜೇಶ್ವರಿನಗರ: ‘ನ್ಯಾಯ, ರಕ್ಷಣೆ ಕೇಳಿ ಬರುವ ನಾಗರಿಕರಿಗೆ ನ್ಯಾಯ ಒದಗಿಸಿ ನೆರವಾಗುವ ಪೊಲೀಸ್‍ನವರೆ ನಿಜವಾದ ರಾಷ್ಟ್ರ ರಕ್ಷಕರು’ ಎಂದು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಅಭಿಪ್ರಾಯಪಟ್ಟರು.

ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ. ಜನಪರ ಸಮಾನ ಮನಸ್ಕಾರ ತಂಡ, ಪತ್ರಕರ್ತರ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಆರ್. ರಘುಕುಮಾರ್ ಅವರಿಗೆ ‘ಆರಕ್ಷಕ ಜನರ ಜೀವ ರಕ್ಷಕ‘ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಶಾಂತಿನಗರ ಬಸ್‌ನಿಲ್ದಾಣದ ಸಮೀಪ ಬಿಎಂಟಿಸಿ ಬಸ್‌ ಚಾಲಕ ವೀರೇಶ್ ವಾಹನ ಚಲಾಯಿಸುತ್ತಿದ್ದಾಗ ಎದೆನೋವಿನಿಂದ ಕುಸಿಯುತ್ತಿದ್ದರು. ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ರಘುಕುಮಾರ್, ಇದನ್ನು ಗಮನಿಸಿ, ಬಸ್ಸಿನೊಳಗೆ ನುಗ್ಗಿ ವೀರೇಶ್ ಅವರನ್ನು ರಕ್ಷಿಸಿ, ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಿದರು. ‘ಇಂಥ ಸಮಾಜ ಮುಖಿ ಸೇವೆ ಮಾಡಿರುವ ಇವರೇ ನಿಜವಾದ ರಕ್ಷಕರು’ ಎಂದು ಶ್ಲಾಘಿಸಿದರು.

ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮಿನಾರಾಯಣ್, ಕೆ.ವೈ.ಕೃಷ್ಣ, ಟಿ.ಪ್ರಭಾಕರ್, ರಾಘವೇಂದ್ರಸ್ವಾಮಿ ಮಠದ ಅಧ್ಯಕ್ಷ ಎಚ್.ಎಸ್.ಸುದೀಂದ್ರ ಕುಮಾರ್, ಅನುಪಮಾ ಪಂಚಾಕ್ಷರಿ, ಎಸ್.ಸಂತೋಷ್, ಟಿ.ಪ್ರಭಾಕರ್, ಎನ್.ಗುರುದೇವ್, ಎ.ಪಿ.ಕುಮಾರ್, ಲಕ್ಷ್ಮಿ ಪ್ರಭು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT