ಬೆಂಗಳೂರು: ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ–ಪಿಆರ್ಆರ್1) ಯೋಜನೆಗೆ ಭೂಮಿ ನೀಡುವ ರೈತರಿಗೆ ಅತ್ಯುತ್ತಮ ಪರಿಹಾರ ನೀಡಲಾಗುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ವಾಸ್ತವಕ್ಕೆ ವಿರುದ್ಧವಾದುದು’ ಎಂದು ಪಿಆರ್ಆರ್ ರೈತ ಹಾಗೂ ನಿವೇಶನದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

‘ಬಿಬಿಸಿ ವಿಚಾರದಲ್ಲಿ ಸರ್ಕಾರದ ಪರಿಹಾರ ಯಾರು ಒಪ್ಪುವುದಿಲ್ಲವೋ ಅವರಿಗೆ ನ್ಯಾಯಾಲಯದಲ್ಲಿ ಹಳೆಯ ದರದಲ್ಲಿ ಠೇವಣಿ ಇರಿಸುವಂತೆ ಅಧಿಕಾರಿಗಳಿಗೆ ಶಿವಕುಮಾರ್ ಅವರು ಸೂಚಿಸಿರುವುದು ಸರಿಯಲ್ಲ. 21 ವರ್ಷಗಳ ಯೋಜನೆ ಇದಾಗಿದ್ದು, ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವರು ಜನರನ್ನು ತಪ್ಪು ದಾರಿಗೆ ಎಳೆಯುವ ಹೇಳಿಕೆ ನೀಡಿದ್ದಾರೆ’ ಎಂದು ಸಂಘದ ಪದಾಧಿಕಾರಿ ಜಗದೀಶ್ ಹೇಳಿದ್ದಾರೆ.

‘ಟಿಡಿಆರ್, ಎಫ್ಎಆರ್ ಸೇರಿ ಸಂತ್ರಸ್ತ ರೈತರಿಗೆ ಐದು ಆಯ್ಕೆಗಳ ಪರಿಹಾರವನ್ನು ನೀಡಲಾಗಿದೆ. ಪರಿಹಾರ ನಿಗದಿಪಡಿಸಲು ಮಾರ್ಗಸೂಚಿ ದರವನ್ನು ಪರಿಗಣಿಸಿ ಸಂಧಾನ ಸೂತ್ರ ಅಳವಡಿಸಲು ಸೂಚಿಸಲಾಗಿದೆ. ಆದರೆ, ಮಾರ್ಗಸೂಚಿ ದರವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘2016ರಲ್ಲಿ ಜಾರಿಗೆ ಬರಬೇಕಿದ್ದ ಮಾರ್ಗಸೂಚಿ ದರಗಳ ಹೆಚ್ಚಳವನ್ನು ತಡೆಹಿಡಿಯುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಬಿಡಿಎ ಪತ್ರ ಬರೆದಿತ್ತು. ಪ್ರಾಧಿಕಾರದ ಹಸ್ತಕ್ಷೇಪದ ಪರಿಣಾಮ ಭೂ ಸ್ವಾಧೀನಕ್ಕೆ ಒಳಪಡುವ ಜಮೀನುಗಳ ಮಾರ್ಗಸೂಚಿ ದರವು ಶೇಕಡ 60ಕ್ಕಿಂತ ಹೆಚ್ಚು ಕಡಿತ ಮಾಡಲಾಗಿದೆ’ ಎಂದು ರೈತ ಹೋರಾಟಗಾರ ಶ್ರೀನಿವಾಸ್ ಹೇಳಿದ್ದಾರೆ.

‘ಪಿಆರ್ಆರ್ ಸಂಬಂಧಿತ ಪ್ರಕರಣಗಳನ್ನು ಸುಪ್ರೀಂ ಕೋರ್ಟ್, ರಾಜ್ಯ ಹೈಕೋರ್ಟ್ಗೆ ವರ್ಗಾಯಿಸಿದೆ. ಕಾನೂನಿನ ಪ್ರಕಾರ ಮೆರಿಟ್ ಆಧಾರದ ಮೇಲೆ ಆಲಿಸಿ ತೀರ್ಪು ನೀಡುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.