ಭಾನುವಾರ, ಆಗಸ್ಟ್ 18, 2019
24 °C

ಬೆಂಗಳೂರಿನಲ್ಲಿ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ

Published:
Updated:

ಬೆಂಗಳೂರು: ರಾಜಧಾನಿಯಲ್ಲಿ ಒಂದು ವಾರದಿಂದ ಮೋಡ‌ ಮುಸುಕಿದ ವಾತಾವರಣ ಇದ್ದು ಅಲ್ಲಲ್ಲಿ ತುಂತುರಾಗಿ ಹನಿಯುತ್ತದ್ದ ಮಳೆ, ಇಂದು(ಗುರುವಾರ) ಗುಡುಗು, ಬಿರುಗಾಳಿ ಸಹಿತ ಧಾರಾಕಾರವಾಗಿ ಸುರಿಯಿತು.

ಮಧ್ಯಾಹ್ನ 2.50ಕ್ಕೆ ತುಂತುರು ಹನಿ ಬೀಳಲಾರಂಭಿಸಿತು. 3.30ಕ್ಕೆ ಬಿರುಸಾದ ಗಾಳಿಯೊಟ್ಟಿಗೆ ಮಳೆ ಧಾರಾಕಾರವಾಗಿ ಸುರಿಯಿತು. ಬಳಿಕ, ಗುಡುಲೂ ಆರಂಭಿಸಿತು.

ವಿಜಯನಗರ, ಬಸವೇಶ್ವರ ನಗರ, ರಾಜಾಜಿನಗರ, ಎಂ.ಜಿ ರಸ್ತೆ, ಕಬ್ಬನ್‌ ಪಾರ್ಕ್‌, ಶಿವಾಜಿನಗರ, ವಿಧಾನಸೌಧ ಸೇರಿದಂತೆ ಹಲವೆಡೆ ಉತ್ತಮ ಮಳೆ ಬಿತ್ತು. 

ವಾಹನಗಳು ಹೆಚ್ಚಿರುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. 

Post Comments (+)