ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಚಿಕಿತ್ಸೆ:ನಕಲಿ ವೈದ್ಯ ಸೇರಿ ಮೂವರ ಬಂಧನ

₹ 8.08 ಲಕ್ಷ ವಂಚನೆ: ವಿಲ್ಸನ್ ಗಾರ್ಡನ್ ಪೊಲೀಸರ ತನಿಖೆ
Last Updated 3 ಜನವರಿ 2023, 21:13 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಪಕ್ಕದಲ್ಲಿ ಶೆಡ್‌ ಹಾಕಿಕೊಂಡು ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ನಕಲಿ ವೈದ್ಯ ಸೇರಿ 3 ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಜಸ್ಥಾನದ ಮೊಹಮ್ಮದ್ ಸಮೀನ್ ಅಲಿಯಾಸ್ ಡಾ. ಮಲ್ಲಿಕ್ (50), ಶೈಫ್ ಅಲಿ (25) ಹಾಗೂ ಮೊಹಮ್ಮದ್ ರಹೀಸ್ (55) ಬಂಧಿತರು. ನೆಲಮಂಗಲ ಬಳಿ ತಾತ್ಕಾ ಲಿಕ ಶೆಡ್‌ ಹಾಕಿಕೊಂಡಿದ್ದ ಮೂವರು, ಆರೋಗ್ಯ ಸಮಸ್ಯೆ ನಿವಾರಣೆ ಮಾಡು ವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಶಾಂತಿನಗರದ ಬಸಪ್ಪ ರಸ್ತೆಯ ನಿವಾಸಿ ಪಂಕಜ್ ಎಂಬುವರು ವಂಚನೆ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ₹ 3.50 ಲಕ್ಷ ನಗದು, 4 ಕಾರು ಹಾಗೂ 3 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಪಂಕಜ್ ತಾಯಿ ಕಾಲುನೋವು ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ನೋವಿನ ಜಾಗದಲ್ಲಿ ಕೀವು ತುಂಬಿಕೊಂಡಿತ್ತು. ಹಲವೆಡೆ ಚಿಕಿತ್ಸೆ ಪಡೆದರೂ ಪರಿಹಾರ ಸಿಕ್ಕಿರಲಿಲ್ಲ. ಪರಿಚಯಸ್ಥರೊಬ್ಬರ ಮೂಲಕ ಪಂಕಜ್‌ ಅವರನ್ನು ಸಂಪರ್ಕಿ ಸಿದ್ದ ಆರೋಪಿಗಳು, ತಮ್ಮ ಬಳಿ ಇರುವ ಔಷಧದಿಂದ ನೋವು ಗುಣವಾಗುತ್ತದೆ ಎಂದು ಹೇಳಿ ಒಂದು ಹನಿ ಔಷಧಕ್ಕೆ
₹ 4 ಸಾವಿರ ಎಂದು ಹೇಳಿ ಒಟ್ಟು ₹ 8.08 ಲಕ್ಷ ಪಡೆದಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT