ಬೆಂಗಳೂರು: ‘ರೇಷ್ಮೆ ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸ್ವಾವಲಂಬನೆ ಸಾಧಿಸಬೇಕು. ರೇಷ್ಮೆ ತ್ಯಾಜ್ಯವನ್ನು ರಫ್ತು ಮಾಡುವ ಬದಲು, ಇಲ್ಲಿಯೇ ಮರುಬಳಕೆ ಮಾಡಲು ಯೋಜನೆ ರೂಪಿಸಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ನ್ಯಾಷನಲ್ ಸಿಲ್ಕ್ ವರ್ಮ್ ಸೀಡ್ ಆರ್ಗನೈಸೇಷನ್ (ಎನ್ಎಸ್ಎಸ್ಒ) ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.

‘ನಮ್ಮಲ್ಲಿನ ರೇಷ್ಮೆ ತ್ಯಾಜ್ಯವು ಚೀನಾಕ್ಕೆ ರಫ್ತು ಆಗುತ್ತಿದೆ. ಅವರು ಅದರಿಂದ ಸಿದ್ಧ ಉಡುಪು ತಯಾರಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಈ ತ್ಯಾಜ್ಯವು ನಮ್ಮಲ್ಲಿಯೇ ಪುನರ್ ಬಳಕೆಯಾದಲ್ಲಿ ರೈತರ ಹಾಗೂ ಉದ್ಯಮಿಗಳ ಆದಾಯ ದುಪ್ಪಟ್ಟಾಗಲಿದೆ. ಆ ನಿಟ್ಟಿನಲ್ಲಿ ಯೋಚನೆ ಮಾಡಬೇಕಿದೆ. ರೇಷ್ಮೆಯ ಬಟ್ಟೆ, ನೂಲು ಮತ್ತು ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ, ರೈತರು ಹಾಗೂ ಉದ್ಯಮಿಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ರೇಷ್ಮೆ ಬಟ್ಟೆಗೆ ಎಲ್ಲೆಡೆ ಬೇಡಿಕೆಯಿದೆ. ಕರ್ನಾಟಕದ ಮೈಸೂರು ಸಿಲ್ಕ್ ಸೀರೆಯು ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದು, ಸಂಸತ್ತಿನಲ್ಲಿ ಮಹಿಳಾ ಸಂಸದರು ಈ ಸೀರೆ ಬಗ್ಗೆ ವಿಚಾರಿಸುತ್ತಾರೆ. ಆದ್ದರಿಂದ ರೇಷ್ಮೆಯಲ್ಲಿ ಗುಣಮಟ್ಟ ಕಾಯ್ದುಕೊಂಡು, ಉತ್ಪಾದನೆ ಹೆಚ್ಚಿಸಬೇಕು’ ಎಂದರು.

‘ಪ್ರಪಂಚದಲ್ಲಿ ಅಧಿಕ ರೇಷ್ಮೆ ಉತ್ಪಾದನೆ ಮಾಡುವ ರಾಷ್ಟ್ರಗಳ ಸ್ಥಾನದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಆದರೂ ರೇಷ್ಮೆಯಲ್ಲಿ ಆತ್ಮನಿರ್ಭರತೆ ಸಾಧ್ಯವಾಗಲಿಲ್ಲ. ಎಣ್ಣೆ ಕಾಳುಗಳು, ಬೇಳೆ ಕಾಳುಗಳನ್ನೂ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದಲ್ಲಿ ರೇಷ್ಮೆ ಬಟ್ಟೆಗಳ ತಯಾರಿಗೆ 45 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಗೂಡು ಅಗತ್ಯ. 41 ಸಾವಿರ ಮೆಟ್ರಿಕ್ ಟನ್ ಗೂಡನ್ನು ಮಾತ್ರ ಬೆಳೆಯಲಾಗುತ್ತಿದೆ. ಸುಮಾರು 5 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಗೂಡನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಎಣ್ಣೆ ಕಾಳುಗಳು, ಬೇಳೆ ಕಾಳು ಹಾಗೂ ರೇಷ್ಮೆಯಲ್ಲಿ ಸ್ವಾವಲಂಬನೆ ಸಾಧಿಸಲು ವಿಶೇಷ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ’ ಎಂದು ಹೇಳಿದರು.

ಸಂಸದ ಡಾ.ಸಿ.ಎನ್. ಮಂಜುನಾಥ್, ‘ರೇಷ್ಮೆಗೂಡಿನ ಉತ್ಪಾದನೆ ದ್ವಿಗುಣವಾಗಬೇಕು. ರಾಜ್ಯದಲ್ಲಿ ಸಿಲ್ಕ್ ಕಾರಿಡಾರ್ ಮಾಡುವ ಜತೆಗೆ, ಹಿಪ್ಪುನೇರಳೆ ಬೆಳೆಗೆ ಸಂಬಂಧಿಸಿದಂತೆ ವಿಶೇಷ ವಲಯ ಘೋಷಿಸಬೇಕಿದೆ. ಜಿಲ್ಲಾ ಮಟ್ಟದಲ್ಲಿ ರೇಷ್ಮೆ ವಸ್ತುಸಂಗ್ರಹಾಲಯವನ್ನೂ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ. ಶಿವಕುಮಾರ, ಎನ್ಎಸ್ಎಸ್ಒ ನಿರ್ದೇಶಕ (ತಾಂತ್ರಿಕ) ಎಸ್. ಮಂಥಿರಾಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.