ಬೆಂಗಳೂರು: ವಿಶ್ವ ಅಂಗವಿಕಲರ ದಿನವನ್ನು ರಾಜ್ಯ ಸರ್ಕಾರವು ಈ ಬಾರಿ ಆಚರಿಸದೇ ಇರುವುದು ದುರದೃಷ್ಟಕರ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ತಿಳಿಸಿದ್ದಾರೆ.

ಡಿ.3ರಂದು ಅಂಗವಿಕಲರ ದಿನವನ್ನು ನೆರೆಹೊರೆಯ ರಾಜ್ಯಗಳು ವಿಜೃಂಭಣೆಯಿಂದ ಆಚರಿಸುವ ಮೂಲಕ ಅಂಗವಿಕಲರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿವೆ. ದೇಶ ಮಾತ್ರವಲ್ಲ, ಜಗತ್ತಿನಾದ್ಯಂತ ಈ ದಿನವನ್ನು ಆಚರಿಸಲಾಗಿದೆ. ಆದರೆ, ಕರ್ನಾಟಕ ಸರ್ಕಾರವು ಡಿ. 8ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ನೆಪವೊಡ್ಡಿ ಆಚರಿಸಿಲ್ಲ ಎಂದು ದೂರಿದ್ದಾರೆ.

ಈಗಾಗಲೇ ದಿನಾಂಕ ಮೀರಿರುವುದರಿಂದ ಈ ತಿಂಗಳ ಒಳಗೆ ದಿನಾಚರಣೆ ಮಾಡಬೇಕು. ಮುಂದಿನ ವರ್ಷದಿಂದ ಈ ರೀತಿ ಲೋಪ ಆಗದಂತೆ ಕ್ರಮ ವಹಿಸಬೇಕು ಎಂದು ಅಂಗವಿಕರ ಶ್ರೇಯೋಭಿವೃದ್ಧಿ ಬಯಸುವ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.