ಬಸವಕಲ್ಯಾಣ: ನಗರದ ನೂತನ ಅನುಭವ ಮಂಟಪ ಸಮೀಪದ ಬಸವ ಮಹಾಮನೆ ಸಂಸ್ಥೆಯಿಂದ ಫೆಬ್ರುವರಿ 21, 22 ಮತ್ತು 23ರಂದು ಸಮತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ' ಎಂದು ಮಹಾಮನೆ ಸಂಸ್ಥೆ ಅಧ್ಯಕ್ಷ ಬೆಲ್ದಾಳ ಸಿದ್ದರಾಮ ಶರಣರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಕೆಲ ವರ್ಷಗಳಿಂದ ಅನುಭವ ಮಂಟಪ ಸಂಸತ್ತು ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗುತ್ತಿದೆ. ಈ ಸಲ ಸಮಾವೇಶದ ಜೊತೆಯಲ್ಲಿ 7ನೇ ಸಂಸತ್ತು ಕಾರ್ಯಕ್ರಮವಿರುತ್ತದೆ. ವಿವಿಧ ಗೋಷ್ಠಿಗಳು ಜರುಗಲಿವೆ. ಮಠಾಧೀಶರು, ಸಾಹಿತಿ, ಚಿಂತಕರು, ರಾಜಕೀಯ ಮುಖಂಡರು, ಗಣ್ಯರು ಪಾಲ್ಗೊಳ್ಳುವರು. ಈ ಬಗ್ಗೆ ಈಗಾಗಲೇ ಪುರ್ವಸಿದ್ಧತಾ ಸಭೆ ಹಮ್ಮಿಕೊಂಡು ಸಕಲ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಸಮಾಜ ಮತ್ತು ಜೀವನದಲ್ಲಿ ಅಶಾಂತಿಯಿದೆ. ಜಾತಿ ತಾರತಮ್ಯವಿದೆ. ಆದ್ದರಿಂದ ಬಸವಾದಿ ಶರಣರ ತತ್ವವನ್ನು ಸಾರಿ ಸಮತೆಯೆಡೆಗೆ ಕೊಂಡೊಯ್ಯುವ ಕಾರ್ಯಕ್ರಮದ ಅಗತ್ಯವಿದೆ. ಮೂರು ದಿನಗಳ ಈ ಮಹತ್ವದ ಸಮಾರಂಭದಲ್ಲಿ ಹೆಚ್ಚಿನವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.