ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಬೀದರ್‌ | 58 ಜನವಸತಿಗಳಲ್ಲಿ ಜಲ ಸಂಕಟ: ಟ್ಯಾಂಕರ್‌ ಮೂಲಕ ನೀರು ಪೂರೈಕೆ

Published : 28 ಏಪ್ರಿಲ್ 2025, 5:58 IST
Last Updated : 28 ಏಪ್ರಿಲ್ 2025, 5:58 IST
ಫಾಲೋ ಮಾಡಿ
Comments
ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿರುವಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ವಿಸ್ತಾರವಾಗುತ್ತಿದೆ. ಸದ್ಯ ಬೀದರ್‌ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ? ಕುಡಿಯುವ ನೀರಿಗೆ ಜನ ಏನು ಮಾಡುತ್ತಿದ್ದಾರೆ? ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಏನು ಮಾಡುತ್ತಿದೆ? ಇದರ ಮೇಲೆ ಬೆಳಕು ಚೆಲ್ಲಲು ‘ಪ್ರಜಾವಾಣಿ’ ‘ಜಲ ದಾಹ’ ಶೀರ್ಷಿಕೆಯಡಿ ಸೋಮವಾರದಿಂದ ಸರಣಿ ವರದಿಗಳನ್ನು ಪ್ರಕಟಿಸಲಿದೆ. ಇದರ ಮೊದಲ ವರದಿ ಇಂದು ಪ್ರಕಟಗೊಂಡಿದೆ...
ಕಪ್ಪೆಕೇರಿಯಲ್ಲಿ ಟ್ಯಾಂಕರ್‌ ನೀರನ್ನು ಕೊಡಗಳಲ್ಲಿ ತುಂಬಿಸಿಕೊಳ್ಳುತ್ತಿರುವ ಮಹಿಳೆಯರು
ಕಪ್ಪೆಕೇರಿಯಲ್ಲಿ ಟ್ಯಾಂಕರ್‌ ನೀರನ್ನು ಕೊಡಗಳಲ್ಲಿ ತುಂಬಿಸಿಕೊಳ್ಳುತ್ತಿರುವ ಮಹಿಳೆಯರು
‘ಮೇ ತಿಂಗಳಲ್ಲಿ 80 ರಿಂದ 100 ಹಳ್ಳಿಗಳಲ್ಲಿ ಸಮಸ್ಯೆ’
ಸದ್ಯ ಜಿಲ್ಲೆಯ 58 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಗುರುತಿಸಿ ಅಲ್ಲಿ ಟ್ಯಾಂಕರ್‌ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಮೇ ತಿಂಗಳಲ್ಲಿ 80ರಿಂದ 100 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದು. ಅದನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ನೀರಿನ ಸಮಸ್ಯೆಗಾಗಿ ಪ್ರತ್ಯೇಕವಾಗಿ ಹಣ ಮೀಸಲಿಟ್ಟಿಲ್ಲ. ಆದರೆ ಆಯಾ ಗ್ರಾಮ ಪಂಚಾಯಿತಿಗಳ ಅನುದಾನ 15ನೇ ಹಣಕಾಸು ಯೋಜನೆಯಡಿ ಮೀಸಲಾದ ಅನುದಾನ ಬಳಸಿಕೊಂಡು ನೀರು ಪೂರೈಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT