ಔರಾದ್: ತಾಲ್ಲೂಕಿನ ಸಂತಪುರ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಈ ಊರಿಗೆ ಅನೇಕ ಯೋಜನೆ ಜಾರಿ ಮಾಡಿ ಕೋಟಿಗಟ್ಟಲೇ ಹಣ ಖರ್ಚು ಮಾಡಿದರೂ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಂತಪುರ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಸೇರಿದಂತೆ ವಿವಿಧ ಸಮುದಾಯದ ಜನರು ವಾಸಿಸುವ ವಾರ್ಡ್ 1 ಹಾಗೂ 2ರಲ್ಲಿ ಕಳೆದ ಎರಡು ವಾರದಿಂದ ನೀರು ಬಾರದೇ ಜನ ತಾಳ್ಮೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ವಾರ್ಡ್ 2ರ ಮಹಿಳೆಯರು ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ತಮಗೆ ಕುಡಿಯಲು ನೀರು ಕೊಡಿ ಎಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.

’ನಮ್ಮ ಗಲ್ಲಿಗೆ ವಾರಕ್ಕೊಮ್ಮೆಯೂ ಸರಿಯಾಗಿ ನೀರು ಬರುವುದಿಲ್ಲ. ಬಂದರೂ ನಾಲ್ಕೈದು ಕೊಡ ಸಿಗುತ್ತವೆ. ಇದರಿಂದಾಗಿ ದಿನ ಬಳಕೆ ಹಾಗೂ ಕುಡಿಯಲು ನೀರಿಗಾಗಿ ನಾವು ಪರದಾಡಬೇಕಿದೆ’ ಎಂದು ಪ್ರತಿಭಟನಾ ನಿರತ ಮಹಿಳೆಯರು ಗೋಳು ತೋಡಿಕೊಂಡರು.

ನೀರು ಬಂದಾಗ ಕೆಲವರು ಮೋಟಾರ್ ಬಳಸುತ್ತಿರುವುದರಿಂದ ಸಿಗುವ ಒಂದೆರಡು ಕೊಡ ನೀರು ಸಿಗದಂತಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

’24 ಗಂಟೆ ನಿರಂತರ ನೀರು ಪೂರೈಸುವುದಾಗಿ ಹೇಳಿ ರಸ್ತೆ ಅಗೆದು ಪೈಪ್ ಹಾಕಿದ್ದಾರೆ. ಆದರೆ, ಅದರಿಂದ ನಮಗೆ ಹನಿ ನೀರು ಬಂದಿಲ್ಲ’ ಎಂದು ಸಂತಪುರನ ರೈತ ಮುಖಂಡ ಪ್ರಭುದಾಸ ಅವರು ಜೆಜೆಎಂ ಕಾಮಗಾರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

’ವಾರ್ಡ್ 1 ಹಾಗೂ 2ರಲ್ಲಿ ನೀರಿನ ಮೂಲ ಗುರುತಿಸಿ ಹೊಸದಾಗಿ ಕೊಳವೆ ಬಾವಿ ಕೊರೆದು ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ನಾವು ಬೀದರ್-ಔರಾದ್ ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ’ ಎಂದು ಭೀಮವಾದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ತುಕಾರಾಮ ಹಸನ್ಮುಖಿ ಎಚ್ಚರಿಸಿದರು.

’ಗ್ರಾಮದಲ್ಲಿ ನೀರಿನ ಮೂಲ ಬತ್ತಿ ಹೋಗಿವೆ. ಜೆಜೆಎಂ ಯೋಜನೆಯಲ್ಲಿ ಕೊರೆದ ತೆರೆದ ಬಾವಿಯಲ್ಲೂ ನೀರಿಲ್ಲ. ಹೀಗಾಗಿ ಕೆಲ ವಾರ್ಡ್ಗಳಿಗೆ ನೀರಿನ ಕೊರತೆಯಾಗಿದೆ. ವಾರ್ಡ್ 1ರಲ್ಲಿ ಸದ್ಯ ಟ್ಯಾಂಕರ್ ನೀರು ಪೂರೈಸುತ್ತಿದ್ದೇವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ತಿಳಿಸಿದ್ದಾರೆ.

ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣ ಆಗಿಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ. ಬಾವಿ ಬಳಿ ಹೊಸದಾಗಿ ಕೊಳವೆ ಬಾವಿ ಕೊರೆದು ಕುಡಿಯವ ನೀರಿನ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.