ಬಾಗೇಪಲ್ಲಿ: ಮತ ಕಳ್ಳತನ ನಿಲ್ಲಿಸಿ ಸ್ಟಿಕ್ಕರ್ ಅಭಿಯಾನಕ್ಕೆ ಬಾಗೇಪಲ್ಲಿ ವಿಧಾನಸ ಭಾಕ್ಷೇತ್ರದ ವ್ಯಾಪ್ತಿಯಲ್ಲಿ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಹಾಗೂ ಕಾಂಗ್ರೆಸ್ ಮುಖಂಡರು ಮಂಗಳವಾರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ರಾಜ್ ಮಾತನಾಡಿ, ರಾಷ್ಟ್ರವ್ಯಾಪಿ ಮತ ಕಳ್ಳತನ ನಿಲ್ಲಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮತ ಕಳ್ಳತನದ ಬಗ್ಗೆ ಕಾಂಗ್ರೆಸ್ ಯುವನಾಯಕ ರಾಹುಲ್ಗಾಂಧಿ, ಸಂಪೂರ್ಣವಾಗಿ ಅಧ್ಯಯನ ಮಾಡಿ ಮತದಾನದ ಅಂಕಿ ಅಂಶಗಳನ್ನು ವಿಶ್ಲೇಷಿಸಿ ದಾಖಲೆಗಳ ಸಮೇತ ಮುಂದೆ ಜನರ ಮುಂದೆ ಬಯಲಿಗೆ ಎಳೆದಿದ್ದಾರೆ. ದೇಶದಾದ್ಯಂತ ಮತ ಅಕ್ರಮ ಬಯಲಿಗೆ ಎಳೆಯಲು ಕಾಂಗ್ರೆಸ್, ಮತಕಳ್ಳತನ ನಿಲ್ಲಿಸಿ ಎಂದು ಸ್ಟಿಕ್ಕರ್ ಅಭಿಯಾನ ಮಾಡಿ ಜನಜಾಗೃತಿ ಮೂಡಿಸುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ನರೇಂದ್ರ, ಪುರಸಭೆ ಸದಸ್ಯ ಎ.ನಂಜುಂಡಪ್ಪ, ಮುಖಂಡ ಆಸೀಫ್, ಸಲೀಮ್, ಗೂಳೂರುಬಾಬು, ಶ್ರೀನಿವಾಸ್, ರಂಜಿತ್ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.