ಚಿಕ್ಕಮಗಳೂರು: ‘ದಲಿತ ಸಂಘಟನೆಗಳು ಅಟ್ರಾಸಿಟಿ ಕಾಯ್ದೆ ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಹೇಳಿರುವ ಜಿಲ್ಲಾ ಯುವ ಒಕ್ಕಲಿಗರ ಸಂಘದ ಅಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರ ಹೇಳಿಕೆಯನ್ನು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ’ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಹೇಳಿದರು.

ಸಮುದಾಯಗಳು ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ನ್ಯಾಯಕ್ಕಾಗಿ ಹಲವು ರೀತಿಯ ಹೋರಾಟಗಳನ್ನು ಮಾಡಿಕೊಂಡು ಬಂದಿವೆ. ಪ್ರಚಾರಕ್ಕಾಗಿ ಮತ್ತು ಅನ್ಯರ ಹೇಳಿಕೆ ಮಾತನ್ನು ಕೇಳಿ ಮನಬಂದಂತೆ ಮಾತನಾಡಿರುವುದು ಸರಿಯಲ್ಲ. ಜಿಲ್ಲಾ ಯುವ ಒಕ್ಕಲಿಗ ಸಂಘದ ಅಧ್ಯಕ್ಷ ಸಂದೀಪ್ ವಿವೇಚನೆಯಿಂದ ಮಾತನಾಡಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ರೀತಿಯ ಅಜ್ಞಾನದ ಹೇಳಿಕೆಗಳಿಂದ ಜಿಲ್ಲೆಯಾದ್ಯಂತ ಅಶಾಂತಿ ಉಂಟಾಗುತ್ತದೆ. ಅಧ್ಯಕ್ಷರಾದವರಿಗೆ ಕನಿಷ್ಠ ಜ್ಞಾನ ಇಲ್ಲವಾದರೆ ಯಾರೂ ಕೂಡ ಭಾವೈಕ್ಯ ಮತ್ತು ಸಹೋದರತೆಯಿಂದ ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.

ಇಷ್ಟೊಂದು ದೂರು ಹೇಳಿರುವ ಒಕ್ಕಲಿಗರ ಸಂಘ ಈವರೆಗೂ ಜಿಲ್ಲೆಯಲ್ಲಿ ನಡೆದ ದಲಿತರ ಮೇಲಿನ ಅತ್ಯಾಚಾರ, ಕೊಲೆ, ಮಾರಣಾಂತಿಕ ಹಲ್ಲೆ ಹಾಗೂ ಸುಲಿಗೆ ಬಗ್ಗೆ ಯಾವತ್ತು ಧ್ವನಿ ಮಾಡಿಲ್ಲ. ಆದರೆ, ಪತ್ರಿನಿತ್ಯ ಯಾವುದೇ ಸಮುದಾಯಕ್ಕೆ ದೌರ್ಜನ್ಯ ನಡೆದಾಗ ಮೊದಲು ಧ್ವನಿ ಎತ್ತುವುದು ದಲಿತ ಸಂಘಟನೆಗಳು ಎಂದು ಹೇಳಿದರು.

ಒಕ್ಕಲಿಗರ ಸಂಘದ ಮುಖಂಡರಾದ ಸಂದೀಪ್ ಮತ್ತು ರಾಜಶೇಖರ್ ವಿಮರ್ಶಿಸಿಕೊಳ್ಳಬೇಕಿದೆ. ಬಹುತೇಕ ದಲಿತರ ಭೂಮಿ ಕಿತ್ತುಕೊಂಡಿರುವುದು ಒಕ್ಕಲಿಗರು, ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಒಕ್ಕಲಿಗರು, ದಲಿತರಿಗೆ ಅಧಿಕಾರ ಮತ್ತು ಎಲ್ಲಾ ರೀತಿಯ ಅವಕಾಶ ವಂಚನೆ ಮಾಡಿರುವುದು ಒಕ್ಕಲಿಗರು ಎಂದು ಅವರು ದೂರಿದರು.

ಒಕ್ಕಲಿಗರ ಸಂಘದ ಮುಖಂಡರು ಹೇಳಿರುವಂತೆ ಸಾವಿರಾರು ಎಸ್.ಸಿ, ಎಸ್.ಟಿ ಪ್ರಕರಣಗಳು ಬಿ ವರದಿಯಾಗುತ್ತಿದೆ. ಕಾರಣ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಕಾನೂನು ವ್ಯವಸ್ಥೆಯನ್ನು ಹಗುರವಾಗಿ ಮಾತನಾಡುವ ವ್ಯಕ್ತಿಗಳಿಂದ ಮತ್ತು ಹಣದಿಂದ ಮುಚ್ಚಿಹಾಕುವ ಪ್ರಭಾವಿಗಳಿಂದಲು ದೌರ್ಜನ್ಯದ ಪ್ರಕರಣಗಳು ಬಿ ವರದಿಯಾಗಿದೆ ಎಂದು ಹೇಳಿದರು.

ಕೂಡಲೇ ಒಕ್ಕಲಿಗರ ಸಂಘದ ಅಧ್ಯಕ್ಷರು ದಲಿತ ಸಮುದಾಯವನ್ನು ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ದಲಿತ ಸಮುದಾಯಗಳು ಬಹಿರಂಗ ಚರ್ಚೆಗೆ ಹಾಗೂ ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ಅಂಗಡಿ ಚಂದ್ರು, ಕೃಷ್ಣಮೂರ್ತಿ, ರಘು, ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.