ಚಿಕ್ಕಮಗಳೂರು: ಕೆಸರುಮಯ ರಸ್ತೆಯಲ್ಲಿ ಶಾಲೆಗೆ ಹೋಗಲಾಗದ ವಿದ್ಯಾರ್ಥಿನಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ರಸ್ತೆ ಸರಿಪಡಿಸಲು ಮನವಿ ಮಾಡಿದ್ದಾರೆ.

ಕೊಪ್ಪ ತಾಲ್ಲೂಕಿನ ಮಲಗಾರು ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ, ಈ ಪತ್ರ ಬರೆದು ಚಿತ್ರ ಸಹಿತ ಕಳುಹಿಸಿದ್ದರೆ.

‘ಲೋಕನಾಥಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಾನು ಓದುತ್ತಿದ್ದು, ತಮ್ಮ ಗ್ರಾಮದ ಮುಖ್ಯ ಸಮಸ್ಯೆ ಇದಾಗಿದೆ. ಶಾಲೆ ಮತ್ತು ಮನೆಗೆ ನಾಲ್ಕು ಕಿಲೋ ಮೀಟರ್ ದೂರವಿದೆ. ರಸ್ತೆ ಕೆಟ್ಟ ಸ್ಥಿತಿಯಲ್ಲಿದ್ದು, ದಾರಿಯುದ್ದಕ್ಕೂ ಕೆಸರು ಮತ್ತು ಹೊಂಡದ ರಸ್ತೆಯಾಗಿದೆ. ಮಳೆಗಾಲದಲ್ಲಿ ಕೆಸರು ನೀರು ರಸ್ತೆಗೆ ಹರಿದು ಬರುವುದರಿಂದ ಶಾಲೆಗೆ ಹೋಗುವುದು ಮಕ್ಕಳಿಗೆ ಹರಸಾಹಸವಾಗಿದೆ’ ಎಂದು ತಿಳಿಸಿದ್ದಾರೆ.

‘ಐಎಎಸ್ ಓದುವ ಕನಸು ಹೊಂದಿರುವ ನಾನು ಕಳಪೆ ರಸ್ತೆಯ ಕಾರಣದಿಂದ ವಾರದಲ್ಲಿ ಮೂರು ದಿನ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಹಿರಿಯರು ಮತ್ತು ಮಹಿಳೆಯರ ಆರೋಗ್ಯ ದೃಷ್ಟಿಯಿಂದಲೂ ಈ ರಸ್ತೆ ಅಪಾಯಕಾರಿಯಾಗಿದೆ. ದಯವಿಟ್ಟು ಗ್ರಾಮದ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆಕೊಳ್ಳುತ್ತೇನೆ. ನಿಮ್ಮ ಸ್ಪಂದನೆಗಾಗಿ ಕಾಯುವೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.