ಕಾಫಿ ಬೆಳೆಹಾನಿ ಅಂದಾಜಿಸಲು ಆಗ್ರಹ
ನಿರಂತರ ಮಳೆಯಿಂದ ಕಾಫಿ ಬೆಳೆ ಕೊಳೆ ರೋಗದ ಕಾಟದಿಂದ ಬಳಲಿದೆ. ಜುಲೈನಲ್ಲೇ ಕಾಣಿಸಿಕೊಂಡ ಕೊಳೆ ರೋಗದಿಂದ ಕಾಫಿ ಫಸಲು ಉದುರಿ ಸಾಕಷ್ಟು ಪ್ರಮಾಣದಲ್ಲಿ ನೆಲ ಕಚ್ಚಿದೆ. ಕಾಫಿ ಮಂಡಳಿಯ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ನಂತರ ಮಳೆ ನಿರಂತರವಾಗಿ ಮುಂದುವರಿದ್ದು ಮತ್ತಷ್ಟು ಬೆಳೆಹಾನಿಗೀಡಾಗಿದೆ. ಕಾಫಿ ಜತೆಗೆ ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಳುಮೆಣಸು ಮತ್ತು ಅಡಿಕೆ ಬೆಳೆಯಲ್ಲಿ ಕೊಳೆರೋಗ ಕಾಡಿದೆ. ನಷ್ಟವನ್ನು ಅಂದಾಜಿಸಿ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂಬುದು ಬೆಳೆಗಾರರ ಆಗ್ರಹ.