ಚಳ್ಳಕೆರೆ ಅಂಬೇಡ್ಕರ್‌ನಗರದಲ್ಲಿ ಪಾಳು ಬಿದ್ದಿರುವ ಸಮುದಾಯ ಶೌಚಾಲಯ
ದುಃಸ್ಥಿತಿಯಲ್ಲಿರುವ ಶೌಚಾಲಯ ನೆಲಸಮ ಮಾಡಲಾಗುವುದು. ಡಿವೈಎಸ್ಪಿ ಕಚೇರಿ ಮುಂಭಾಗ ₹30 ಲಕ್ಷ ವೆಚ್ಚದಲ್ಲಿ ಮಾದರಿ ಶೌಚಾಲಯ ಕಾಮಗಾರಿ ಪ್ರಾರಂಭಿಸಲಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಲಾಗುವುದು
ನರೇಂದ್ರಬಾಬು, ಪರಿಸರ ಎಂಜಿನಿಯರ್
ಪೌರಕಾರ್ಮಿಕರ ಕೊರತೆಯ ಕಾರಣ 2–3 ತಿಂಗಳಿಗೊಮ್ಮೆ ಜಟ್ಟಿಂಗ್ ಯಂತ್ರದಿಂದ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ. ಸ್ವಚ್ಛತೆಗೆ ನೀರಿನ ಕೊರತೆ ಇಲ್ಲ. ಶೌಚಾಲಯ ನಮ್ಮದು ಎಂಬ ಭಾವ ಬೆಳೆಸಿಕೊಂಡು ಜನರು ಜವಾಬ್ದಾರಿಯಿಂದ ಬಳಸಬೇಕು
ಮಲ್ಲಿಕಾರ್ಜುನ, ನಗರಸಭೆ ಸದಸ್ಯ
ಶೌಚಾಲಯಗಳು ನೆಪಕ್ಕೆ ಮಾತ್ರ ಇವೆ. ಸಮರ್ಪಕ ನೀರು ಪೂರೈಕೆ ಹಾಗೂ ಸ್ವಚ್ಛತೆ ಇಲ್ಲ. ಕೆಲವು ಮುಳ್ಳುಗಿಡಗಳಿಂದ ಮುಚ್ಚಿ ಹೋಗಿವೆ. ಕೆಲವಕ್ಕೆ ಬೀಗ ಹಾಕಲಾಗಿದೆ.
ಸರಸ್ವತಮ್ಮ, ಇಂಜನಹಟ್ಟಿ ನಿವಾಸಿ
ಶೌಚಾಲಯ ನಿರ್ಮಿಸಿಕೊಳ್ಳಲು ಮನೆ ಹತ್ತಿರ ಜಾಗ ಮತ್ತು ಹಣವೂ ಇಲ್ಲ. ನಗರದ ಹಲವು ಕುಟುಂಬಗಳು ಸಾಮೂಹಿಕ ಶೌಚಾಲಯವನ್ನೇ ಅವಲಂಬಿಸಿವೆ