ಮಂಗಳವಾರ, ಮಾರ್ಚ್ 2, 2021
19 °C

ಹಂಪನಾ ಪೋಲಿಸ್ ವಿಚಾರಣೆ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ  ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಹೊಸದುರ್ಗ: ರೈತ ವಿರೋಧಿ ಕಾನೂನು ವಾಪಸ್ ಪಡೆಯುವಂತೆ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಪರವಾಗಿ ಹಿರಿಯ ಸಾಹಿತಿ ಹಂಪನಾ ಹೋಗಿದ್ದು ಅಭಿನಂದನಾರ್ಹ. ಆದರೆ, ಪೊಲೀಸರು ಹಂಪನಾ ಅವರನ್ನು ವಿಚಾರಣೆ ಮಾಡಿರುವುದು ಖಂಡನೀಯ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
 
ದೆಹಲಿಯಲ್ಲಿ ಚಳಿ, ಮಳೆ, ಬಿಸಿಲೆನ್ನದೆ ರೈತರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಒಂದು ತಿಂಗಳಿಂದ ಹೊಸದಾಗಿ ಜಾರಿಗೊಳಿಸಲಿರುವ ಮೂರು ರೈತವಿರೋಧಿ ಕಾನೂನುಗಳನ್ನು ವಾಪಾಸ್ ಪಡೆಯಲು ಸಂಘಟಿತ ಹೋರಾಟ ಮಾಡುತ್ತಿದ್ದಾರೆ. ಎಲ್ಲ ರಾಜಿ- ಸಂಧಾನಗಳು ಮುರಿದುಬಿದ್ದಿವೆ. ಈ ನಾಡಿನ ಬೆನ್ನೆಲುಬು ರೈತರು ಎಂದು ವಿವರಿಸಬೇಕಾಗಿಲ್ಲ. ನಮಗೆ ಅನ್ನ ಕೊಡುವ ರೈತರನ್ನು ಯಾರೂ ಉಪೇಕ್ಷೆ ಮಾಡಬಾರದು. 

ಸರ್ಕಾರದ ರೈತವಿರೋಧಿ ನೀತಿಯನ್ನು ವಿರೋಧಿಸಿ ಸಾರ್ವಜನಿಕರು, ಸಾಹಿತಿಗಳು, ಮಠಾಧೀಶರು, ಪ್ರಗತಿಪರರು ರೈತರ ಪರವಾಗಿ ನಿಲ್ಲಬೇಕಾದ್ದು ನಿಜವಾದ ಮಾನವೀಯತೆ. ಆ ಕೆಲಸವನ್ನು ಹಿರಿಯ ಸಾಹಿತಿ ಹಂಪನಾ ಅವರು ಮಾಡಿದ್ದು ಸ್ವಾಗತಾರ್ಹ. ಇಂತಿರುವಾಗ ಅವರಿಂದ ಪೋಲಿಸರು ಮುಚ್ಚಳಿಕೆ ಬರೆಸಿಕೊಂಡಿದ್ದರೆ ಅದು ಪ್ರತಿಭಟನಾರ್ಹ. ಸರ್ಕಾರ ಅಂತಹ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು