ಹೊಸದುರ್ಗ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಪ್ರತಿಭಟನಾ ರ್ಯಾಲಿಯೂ ವೀರಭದ್ರೇಶ್ವರ ಸ್ವಾಮಿ ದೇವಾಲಯದಿಂದ ಆರಂಭವಾಗಿ ತಾಲ್ಲೂಕು ಕಚೇರಿವರೆಗೂ ಸಾಗಿತು. ನಂತರ ಗ್ರೇಡ್ 2 ತಹಶೀಲ್ದಾರ್ ಕೆ.ಓ. ಪಾಲಯ್ಯ ಅವರಿಗೆ ಮನವಿ ಸಲ್ಲಿಸಿದರು.

ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಮಾತನಾಡಿ, ‘ಕೇವಲ ಮತಗಳಿಗಾಗಿ ನೀಚ ಹೇಳಿಕೆಗಳನ್ನು ನೀಡಬೇಡಿ. ಕೆಲವರ ಕುತಂತ್ರದಿಂದಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ನಂಬಿಕೆಗೆ ಕುತ್ತು ಬಂದಿದೆ. ಮಾಧ್ಯಮದವರು ಈ ಬಗ್ಗೆ ಗಮನಹರಿಸಿ ಸೂಕ್ಷ್ಮವಾಗಿ ವರದಿ ಮಾಡಬೇಕು. ಧರ್ಮದ ಉಳಿವಿಗಾಗಿ ರಾಜಕೀಯ ಅಧಿಕಾರ ಬೇಕು’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ರಾಜ್ಯಾಧ್ಯಕ್ಷ ಡಿ.ವೈ ವಿಜಯೇಂದ್ರ ಆದೇಶದ ಮೇರೆಗೆ ಈ ಪ್ರತಿಭಟನೆ ಆಯೋಜಿಸಲಾಗಿದೆ. ಬಿಜೆಪಿ ಧರ್ಮವನ್ನು ಕಾಪಾಡಲು ಸದಾ ಬದ್ಧವಾಗಿರುತ್ತದೆ. ಸೆ. 1ರಂದು ಬೆಳಿಗ್ಗೆ 11ಕ್ಕೆ ಧರ್ಮಸ್ಥಳ ಚಲೋ ರ್ಯಾಲಿ ಇದ್ದು, ಎಲ್ಲರೂ ಸ್ವಯಂ ಪ್ರೇರಿತರಾಗಿ ಬನ್ನಿ ಎಂದು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಸುರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ, ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್, ಮುಖಂಡರಾದ ಶಿವು ಮಠ, ಡಿ.ಎಸ್. ಪ್ರದೀಪ್, ಕೆ. ಎಸ್, ಕಲ್ಮಠ್, ಲಿಂಗಮೂರ್ತಿ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಡಿ. ಗುರುಸ್ವಾಮಿ, ಆನಂದ, ಗೂಳಿಹಟ್ಟಿ ನಾಗರಾಜ್, ಕೋಡಿಹಳ್ಳಿ ತಮ್ಮಣ್ಣ, ದಿಲ್ಸೆ ದಿಲೀಪ್, ನಾಗರಾಜ್, ಸಿಂಧು ಅಶೋಕ್, ಜಗದೀಶ್ ರಾಮಯ್ಯ, ಪುರಸಭೆ ಸದಸ್ಯ ನಾಗರಾಜ್, ಹೆಗ್ಗೆರೆ ಶಂಕರಪ್ಪ, ಮಧುರೆ ಪ್ರವೀಣ್, ಕೊಂಡಾಪುರ ಮಂಜುನಾಥ್ ಸೇರಿ ಬಿಜೆಪಿ ಕಾರ್ಯಕರ್ತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.