ನಗರ ಪ್ರದೇಶದ ಜನರು ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಮೂತ್ರ ವಿಸರ್ಜನೆಗೂ ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಆಲೋಚನೆ ಮಾಡಿ ನೀರು ಕುಡಿಯುತ್ತಿದ್ದೇನೆ
ಸಮೀಕ್ಷಕಿ ದಾವಣಗೆರೆ
ಸಮೀಕ್ಷೆ ಪೂರ್ಣಗೊಳಿಸಿದರೂ ಹಂಚಿಕೆ ಮಾಡಿದ ಮನೆಗಳು ಬಾಕಿ ಇವೆ ಎಂಬುದಾಗಿ ‘ಆ್ಯಪ್’ ತೋರಿಸುತ್ತಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸುವ ಬದಲು ಒತ್ತಡ ಹೇರಲಾಗುತ್ತಿದೆ
ಸಮೀಕ್ಷಕ ಹರಿಹರ
ತಾಲ್ಲೂಕುವಾರು ಸಮೀಕ್ಷೆ
ಜಿಲ್ಲೆಯಲ್ಲಿ ಸಮೀಕ್ಷೆಯ ಪ್ರಗತಿ ತಾಲ್ಲೂಕು ಸಮೀಕ್ಷೆ ಜಗಳೂರು ಶೇ 99 ಚನ್ನಗಿರಿ ಶೇ 96 ಹೊನ್ನಾಳಿ ಶೇ 94 ನ್ಯಾಮತಿ ಶೇ 91 ಹರಿಹರ ಶೇ 89 ದಾವಣಗೆರೆ ಶೇ 74
ಹೆಚ್ಚುವರಿ ಮನೆ ಹಂಚಿಕೆ
ನಿಗದಿಪಡಿಸಿದ್ದ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದವರಿಗೆ ಹೆಚ್ಚುವರಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಹೊಸದಾಗಿ ಸೃಜಿಸಿದ ‘ವಿಶೇಷ ಮನೆ ಸಂಖ್ಯೆ’ (ಯುಎಚ್‌ಐಡಿ) ಒದಗಿಸಲಾಗಿದೆ. ಈ ಮನೆಗಳನ್ನು ಹುಡುಕುವುದು ಸಮೀಕ್ಷಕರಿಗೆ ಸವಾಲಾಗಿದೆ. ‘ಹೊಸದಾಗಿ ಸೃಜಿಸಿದ ಯುಎಚ್‌ಐಡಿಗಳನ್ನು ಹಂಚಿಕೆ ಮಾಡಲಾಗಿದೆ. ಒಂದು ಮನೆಗೂ ಮತ್ತೊಂದು ಮನೆಗೂ ಮೂರ್ನಾಲ್ಕು ಕಿ.ಮೀ ಅಂತರವಿದೆ. ದಾವಣಗೆರೆ ಮತ್ತು ಹರಿಹರ ನಗರಗಳಲ್ಲಿ ಈ ಮನೆಗಳನ್ನು ಪತ್ತೆ ಮಾಡುವುದೇ ಸವಾಲಾಗಿದೆ. ಎದುರಾಗುತ್ತಿರುವ ತಾಂತ್ರಿಕ ತೊಡಕುಗಳ ನಿವಾರಣೆಗೂ ಸ್ಪಂದನೆ ದೊರೆಯುತ್ತಿಲ್ಲ’ ಎಂದು ಸಮೀಕ್ಷಕರೊಬ್ಬರು ಬೇಸರ ಹೊರಹಾಕಿದರು.