ಹುಬ್ಬಳ್ಳಿ: ಬ್ರಾಹ್ಮಣ ಸಮಾಜದ ಮುಖಂಡ ಮುಕುಂದ ನಾತು ಅವರ ಸ್ಮರಣಾರ್ಥ ಹುಬ್ಬಳ್ಳಿ-ಧಾರವಾಡ ಬ್ರಾಹ್ಮಣ ಸಮಾಜ ಹಾಗೂ ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದಿಂದ ಫೆ. 28ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಸಮುದಾಯದ ಮುಖಂಡ ಎ.ಸಿ. ಗೋಪಾಲ ಹೇಳಿದರು.

ಶಿಬಿರವು ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ನಡೆಯಲಿದೆ. ರಕ್ತದಾನ ಮಾಡುವವರ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು. ಅಂದಾಜು 500 ಮಂದಿಭಾಗವಹಿಸುವ ನಿರೀಕ್ಷೆ ಇದೆ. 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಆರೆಸ್ಸೆಸ್ ಮುಖಂಡಸುಧಾಕರ ಅವರು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಟ್ರಸ್ಟಿಗಳಾದ ದತ್ತಮೂರ್ತಿ ಕುಲಕರ್ಣಿ, ಬ್ರಾಹ್ಮಣ ಸಮಾಜದ ಲಕ್ಷ್ಮಣರಾವ್ ಓಕ್, ವಸಂತ ನಾಡಜೋಶಿ, ಸುನೀಲ ಗುಮಾಸ್ತೆ, ಲಕ್ಷ್ಮಣ ಕುಲಕರ್ಣಿ, ಶಂಕರ ಪಾಟೀಲ, ಮನೋಹರ ಪರ್ವತಿ, ಆರ್.ಆರ್. ಬಿಜಾಪುರ, ಡಾ.ಡಿ.ಪಿ. ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.