ಗುರುವಾರ, 27 ನವೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಎಲ್‌ಇಡಿ ಬೀದಿ ದೀಪ ಅಳವಡಿಕೆ; ತಿಂಗಳ ಗಡುವು

Published : 27 ನವೆಂಬರ್ 2025, 5:35 IST
Last Updated : 27 ನವೆಂಬರ್ 2025, 5:35 IST
ಫಾಲೋ ಮಾಡಿ
Comments
ಪಾಲಿಕೆಯ ಸದಸ್ಯರಿಗೆ ಸಿವಿಲ್‌ ಕಾಮಗಾರಿಗಾಗಿ ₹25 ಲಕ್ಷ ಮತ್ತು ಎಲೆಕ್ಟ್ರಿಕ್ ಕಾಮಗಾರಿಗಾಗಿ ₹10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ
ಜ್ಯೋತಿ ಪಾಟೀಲ ಮೇಯರ್‌
ಭದ್ರತೆ ದೃಷ್ಟಿಯಿಂದ ಪ್ರಮುಖ ವೃತ್ತಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು ಈ ಬಗ್ಗೆ ಪೊಲೀಸ್‌ ಸಿಬ್ಬಂದಿ ಜತೆ ಸಭೆ ನಡೆಸಬೇಕು
ರಾಜಣ್ಣ ಕೊರವಿ ಸದಸ್ಯ
ನಾಯಿ ಕಚ್ಚಿದ ಪ್ರಕರಣಗಳಲ್ಲಿ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಮಾಡಬೇಕು. ಆಸ್ಪತ್ರೆಗಳಲ್ಲಿ ಈ ಪ್ರಕರಣಕ್ಕೆ ಅಗತ್ಯ ಔಷಧಗಳು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು
ಇಕ್ಬಾಲ್ ನವಲೂರು ಸದಸ್ಯ
ಗೋಕುಲ ರಸ್ತೆಯಲ್ಲಿ ಮಾಲ್‌ಗಳು ಹೆಚ್ಚಾಗಿದ್ದು ರಸ್ತೆ ಬದಿಯೇ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕ್ರಮ ಜರುಗಿಸಬೇಕು
ರಾಮಪ್ಪ ಬಡಿಗೇರ ಸದಸ್ಯ  
ಪಾರ್ಕಿಂಗ್ ಶುಲ್ಕ ಕೊಡಬೇಡಿ’
‘ಪಾರ್ಕಿಂಗ್ ಶುಲ್ಕ ಸಂಗ್ರಹಿಸುವುದು ರದ್ದುಪಡಿಸಿದ್ದರೂ ಹುಬ್ಬಳ್ಳಿಯ ಕೊಪ್ಪಿಕರ್‌ ರಸ್ತೆ ಸೇರಿ ಇತರೆಡೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯ ಶಿವು ಮೆಣಸಿನಕಾಯಿ ಆಗ್ರಹಿಸಿದರು. ‘ಸಾಮಾನ್ಯ ಸಭೆಯಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ನೀಡಿದ್ದ ಟೆಂಡರ್ ರದ್ದುಪಡಿಸುವಂತೆ ಠರಾವು ಆಗಿದೆ. ಟೆಂಡರ್‌ ರದ್ದುಪಡಿಸಲಾಗಿದ್ದು ಅವಳಿ ನಗರದಲ್ಲಿ ಸಾರ್ವಜನಿಕರು ಪಾರ್ಕಿಂಗ್ ಶುಲ್ಕ  ನೀಡಬಾರದು’ ಎಂದು ಆಯುಕ್ತ ರುದ್ರೇಶ ಘಾಳಿ ಹೇಳಿದರು. ‘ಪಾಲಿಕೆ ವ್ಯಾಪ್ತಿಯ 42 ಗ್ರಾಮಗಳಲ್ಲಿ ಈ ಸ್ವತ್ತು ಪಡೆಯಲು ಸಮಸ್ಯೆಯಾಗುತ್ತಿದೆ. ಇ–ಸ್ವತ್ತು ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು’ ಎಂದು ಸದಸ್ಯ ರಾಮಪ್ಪ ಬಡಿಗೇರ ಒತ್ತಾಯಿಸಿದರು. ರುದ್ರೇಶ ಘಾಳಿ ಪ್ರತಿಕ್ರಿಯಿಸಿ ‘ಗಾವಟಾಣ ಜಾಗ ಇರುವ ಕಡೆ ಈ ಸಮಸ್ಯೆ ಇದೆ. ಸರ್ವೆ ಮಾಡಿ ಪಂಚನಾಮೆ ವರದಿಯನ್ನು ವಲಯ ಕಚೇರಿಗೆ ನೀಡಿದರೆ ಇ–ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಕೆಯುಐಡಿಎಫ್‌ಸಿಗೆ ವಂತಿಕೆ ಪಾವತಿ;
ಚರ್ಚೆ ಅವಳಿ ನಗರದಲ್ಲಿ ಅನುಷ್ಠಾನವಾಗುತ್ತಿರುವ 24X7 ಕುಡಿಯುವ ನೀರಿನ ಯೋಜನೆಗೆ ಮಹಾನಗರ ಪಾಲಿಕೆಯು ₹250 ಕೋಟಿ ಬಾಕಿ ವಂತಿಕೆಯನ್ನು ಕೆಯುಐಡಿಎಫ್‌ಸಿಗೆ ಭರಿಸಬೇಕಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ತಿಪ್ಪಣ್ಣ ಮಜ್ಜಗಿ ವಂತಿಕೆ ಭರಿಸಲು ತಕರಾರು ಇಲ್ಲ. ಆದರೆ ಯೋಜನೆ ಹಸ್ತಾಂತರವಾಗಬೇಕಾದರೆ ಜಲಮಂಡಳಿಯಲ್ಲಿ ಉಳಿದಿದ್ದ ₹19 ಕೋಟಿ ಎಲ್ಲಿ ಹೋಯಿತು. ಯೋಜನೆಯ ಪರಿಕರಗಳು ಏನಾದವು ಎಂದು ಪ್ರಶ್ನಿಸಿದರು. ಈ ಬಗ್ಗೆ ಮುಂದಿನ ಸಭೆಯಲ್ಲಿ ಅಗತ್ಯ ಕಡತಗಳೊಂದಿಗೆ ಚರ್ಚೆ ನಡೆಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಹು–ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಂತಿಮ ವಿನ್ಯಾಸ ಅನುಮೋದನೆಗೊಂಡ ವಿನ್ಯಾಸಗಳನ್ನು ಪಾಲಿಕೆಗೆ ಹಸ್ತಾಂತರಿಸಿಕೊಳ್ಳಲು ಸ್ಟೀಲ್ ಕಂಟೇನರ್‌ (ಘನತ್ಯಾಜ್ಯ ವಸ್ತು ನಿರ್ವಹಣೆ) ಶುಲ್ಕ ಆಕರಿಸುವುದುನ್ನು ಮುಂದಿನ ಬಜೆಟ್‌ವರೆಗೆ ನಿಲ್ಲಿಸಬೇಕು. ಈ ಬಗ್ಗೆ ಹಣಕಾಸು ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು  ಎಂದು ಮೇಯರ್ ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT