ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಫ್‌ ಕ್ರೀಡಾಕೂಟ: ಕಂಚು ಗೆದ್ದ ಪ್ರಿಯಾಂಕಾ‌

Last Updated 25 ಮೇ 2022, 2:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ತಾಲ್ಲೂಕಿನ ಮುಗಳಿ ಗ್ರಾಮದ ಅಥ್ಲೀಟ್‌ ಪ್ರಿಯಾಂಕಾ ಓಲೇಕಾರ ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದ 19ನೇ ಅಂತರರಾಷ್ಟ್ರೀಯ ಶಾಲಾ ಸ್ಪೋರ್ಟ್ಸ್ ಫೆಡರೇಷನ್‌ (ಐಎಸ್‌ಎಫ್‌) ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಪ್ರಿಯಾಂಕಾ ಶಾಟ್ ಮಿಡ್ಲ್‌ ರಿಲೆ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. 800 ಮೀಟರ್‌ ಓಟದ ವಿಭಾಗದಲ್ಲಿಯೂ ಪಾಲ್ಗೊಂಡಿದ್ದರು. ಪ್ರಿಯಾಂಕಾ ಆರ್.ಎನ್.ಶೆಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದು,ಡಿವೈಇಎಸ್ಎಸ್‌ನ ಕ್ರೀಡಾ ನಿಲಯದಲ್ಲಿ ಅಥ್ಲೆಟಿಕ್‌ ಕೋಚ್‌ ಶ್ಯಾಮಲಾ ಪಾಟೀಲ ಅವರ ಬಳಿ ತರಬೇತಿ ಪಡೆದಿದ್ದಾರೆ. ಪ್ರಿಯಾಂಕಾ ತಂದೆ ಮಡಿವಾಳಪ್ಪ ಬಿಆರ್‌ಟಿಎಸ್‌ನಲ್ಲಿ ಚಾಲಕರು.

ಪ್ರಿಯಾಂಕಾ ರಾಷ್ಟ್ರೀಯ ಮಟ್ಟದಅಥ್ಲೆಟಿಕ್ಸ್‌ನಲ್ಲಿ 400, 600 ಮತ್ತು 800 ಮೀ. ಓಟದ ಸ್ಪರ್ಧೆಗಳಲ್ಲಿ ಒಂಬತ್ತು ಪದಕಗಳನ್ನು ಜಯಿಸಿದ್ದಾರೆ.

ಐಎಸ್‌ಎಫ್‌ ಕ್ರೀಡಾಕೂಟಕ್ಕೆ ಭಾರತ ಬಾಲಕಿಯರ ತಂಡದ ಕೋಚ್‌ ಆಗಿ ತೆರಳಿದ್ದ ಶ್ಯಾಮಲಾ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಪ್ರಿಯಾಂಕಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದು ಹೆಮ್ಮೆಯ ಭಾವ ಮೂಡಿಸಿದೆ. ಚೀನಾ, ಬ್ರೆಜಿಲ್‌, ಕಜಕಸ್ತಾನ, ಫ್ರಾನ್ಸ್‌ ದೇಶಗಳ ಪ್ರಬಲ ಪೈಪೋಟಿ ನಡುವೆಯೂ ಉತ್ತಮ ಪ್ರದರ್ಶನ ತೋರಿದ್ದಾಳೆ. ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲು ಈಗಿನ ಸಾಧನೆ ಪ್ರೇರಣೆಯಾಗಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಪದಕದೊಂದಿಗೆ ಧಾರವಾಡಕ್ಕೆ ಬಂದ ಪ್ರಿಯಾಂಕಾ ಹಾಗೂ ಕೋಚ್‌ ಶ್ಯಾಮಲಾ ಪಾಟೀಲ ಅವರನ್ನು ಕ್ರೀಡಾಪ್ರೇಮಿಗಳು ಹಾಗೂ ಅಥ್ಲೆಟಿಕ್‌ ತರಬೇತುದಾರರು ಆತ್ಮೀಯವಾಗಿ ಬರಮಾಡಿಕೊಂಡು ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT