ಧಾರವಾಡದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಭಿಕರು
ಭವಿಷ್ಯ ಸುಂದರವಾಗಬೇಕಾದರೆ ವರ್ತಮಾನದ ಎಚ್ಚರ ಇರಬೇಕು. ನಮ್ಮ ದಿಕ್ಕು ಮತ್ತು ಹೆಜ್ಜೆಗಳ ಪ್ರಜ್ಞೆ ಇರಬೇಕು. ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು
-ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಅಧ್ಯಕ್ಷ ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ–ವಿಜಯಪುರ
ರಾಮಕೃಷ್ಣ– ವಿವೇಕಾನಂದ ಭಾವಪ್ರಚಾರ ಪರಿಷತ್ತು ಸಮಾಜ ಪರಿವರ್ತನೆಗೆ ರಾಮಕೃಷ್ಣ ವಿವೇಕಾನಂದ ಅವರ ಜೀವನ ಸಂದೇಶಗಳನ್ನು ಜನಮನದಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ. ಉತ್ತಮ ಚಾರಿತ್ರ್ಯ ಬೆಳೆಸುವ ಶಿಕ್ಷಣ ನೀಡಬೇಕು. ಧರ್ಮ ಕರ್ಮಗಳ ಅಂತರ ಹೋಗಲಾಡಿಸಬೇಕು.
-ಮುಕ್ತಿದಾನಂದ ಸ್ವಾಮೀಜಿ, ಅಧ್ಯಕ್ಷ ರಾಮಕೃಷ್ಣ ಆಶ್ರಮ ಮೈಸೂರು
ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಅಧ್ಯಾತ್ಮ ಸಹಕಾರಿ. ಮನಸ್ಸು ಶಕ್ತಿಯನ್ನು ಜಾಗೃತಗೊಳಿಸಿ ಸನ್ಮಾನಗದಲ್ಲಿ ನಡೆಯಬೇಕು. ರಾಮಕೃಷ್ಣ ವಿವೇಕಾನಂದ ಆಶ್ರಮದ ಯಾತ್ರಿ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ₹10 ಲಕ್ಷ ಒದಗಿಸುತ್ತೇನೆ
-ಅರವಿಂದ ಬೆಲ್ಲದ, ಶಾಸಕ
ರಾಮಕೃಷ್ಣ ಪರಮಹಂಸ ಅವರಿಗೆ ಅಧ್ಯಾತ್ಮದ ಬಗ್ಗೆ ಅಪಾರ ಒಲವು ಇತ್ತು. ಅವರು ಸ್ವಾಮಿ ವಿವೇಕಾನಂದರ ಮೂಲಕ ಜಗತ್ತಿಗೆ ಅಧ್ಯಾತ್ಮದ ಶಕ್ತಿ ಪಸರಿಸುವ ಕಾಯಕ ಮಾಡಿದರು. ಧರ್ಮ ಎಂದರೆ ಪೂಜಾ ಪದ್ಧತಿ ಅಲ್ಲ ಎಂದು ನಿರೂಪಿಸಿದವರು ಸ್ವಾಮಿ ವಿವೇಕಾನಂದರು