‘ಶಾಲೆ ಶಿಕ್ಷಕರ ನಡುವೆ ಮೈಮನಸ್ಸು’
‘ಶಾಲೆಯ ವಿದ್ಯಾರ್ಥಿನಿಯರ ಪೋಷಕರು ಯಾವುದೇ ದೂರು ನೀಡಿಲ್ಲ. ಮುಖ್ಯ ಶಿಕ್ಷಕರೇ ದೂರು ನೀಡಿದ್ದಾರೆ. ಶಿಕ್ಷಕನ ಮೇಲಿರುವ ಆರೋಪ ಹಾಗೂ ಶಿಕ್ಷಕ ನೀಡಿರುವ ದೂರಿನ ಪರಿಶೀಲನೆ ನಡೆಸಿದಾಗ, ಶಾಲೆಯಲ್ಲಿರುವ ಕೆಲ ಶಿಕ್ಷಕರ ನಡುವಿನ ಮೈಮನಸ್ಸು ಗಮನಕ್ಕೆ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ದೌರ್ಜನ್ಯ ನಡೆದಿದೆ ಎನ್ನಲಾದ ವಿದ್ಯಾರ್ಥಿನಿಯರು, ಅವರ ಪೋಷಕರು ಹಾಗೂ ಸಂಬಂಧಪಟ್ಟವರ ಹೇಳಿಕೆ ಪಡೆಯಲಾಗುತ್ತಿದೆ. ಈಗ ಶಿಕ್ಷಕ ದೂರು ನೀಡಿರುವುದರಿಂದ, ಅವರ ಹೇಳಿಕೆಯನ್ನೂ ಪಡೆದಿದ್ದೇವೆ. ಲಭ್ಯವಿರುವ ಪುರಾವೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದರು. ‘ಶಿಕ್ಷಕನ ವಿರುದ್ಧ ಮನಸ್ತಾಪ ಹೊಂದಿದ್ದ ಕೆಲವರು, ಸುಖಾಸುಮ್ಮನೆ ಆರೋಪ ಮಾಡಿ ಥಳಿಸಿ ಮೆರವಣಿಗೆ ಮಾಡಿಸಿರುವ ಅನುಮಾನವೂ ಇದೆ. ಈ ಬಗ್ಗೆ ಶಿಕ್ಷಕ ಸಹ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಆರೋಪದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಬೇಕಿದೆ’ ಎಂದರು.