ಹಾವೇರಿಯಲ್ಲಿ ಚಳಿ ಹೆಚ್ಚಿರುವುದರಿಂದ ಜನರು ಬೆಂಕಿ ಕಾಯಿಸಿಕೊಂಡರು
ಆರೋಗ್ಯದ ಬಗ್ಗೆ ಇರಲಿ ಕಾಳಜಿ
‘ಶೀತಗಾಳಿ ಹಾಗೂ ಚಳಿ ಹೆಚ್ಚಿರುವುದರಿಂದ ಜನರು ಚಳಿಗಾಲದ ಬಟ್ಟೆಗಳನ್ನು ಉಪಯೋಗಿಸಬೇಕು. ಬೆಳಿಗ್ಗೆ ಹಾಗೂ ಸಂಜೆಯ ಸಂದರ್ಭದಲ್ಲಿ ಹೊರಗಡೆ ಓಡಾಡಬಾರದು. ಪ್ರಯಾಣ ಕಡಿಮೆ ಮಾಡಬೇಕು. ಒದ್ದೆಯಾಗಿರುವ ಬಟ್ಟೆಗಳನ್ನು ತ್ವರಿತವಾಗಿ ಬದಲಾಯಿಸಬೇಕು. ಕೈಗವಸುಗಳಿಗೆ ಹಾಕಿಕೊಳ್ಳಬೇಕು. ಬಿಸಿ ನೀರಿನಲ್ಲಿ ಮುಖ ತೊಳೆಯಬೇಕು. ಬಿಸಿ ನೀರಿನಲ್ಲಿಯೇ ಸ್ನಾನ ಮಾಡಬೇಕು’ ಎಂದು ವೈದ್ಯರು ಸಲಹೆ ನೀಡಿದ್ದಾರೆ. ‘ಮದ್ಯಪಾನ ಮಾಡಬಾರದು. ಚರ್ಮವನ್ನು ಹೆಚ್ಚು ಉಜ್ಜಬಾರದು. ಚಳಿಗಾಲ ಇರುವುದರಿಂದ ಮಕ್ಕಳು ಐಸ್‌ಕ್ರೀಮ್ ತಂಪು ಪಾನೀಯಗಳನ್ನು ಸೇವಿಸಬಾರದು. ಇದರಿಂದ ಶೀತ ಕೆಮ್ಮು ಕಫ ಜ್ವರ ಬರುವ ಸಾಧ್ಯತೆ ಹೆಚ್ಚು. ಬೆಳಿಗ್ಗೆ ತಡವಾಗಿ ವಾಯು ವಿಹಾರಕ್ಕೆ ಹೋಗಬೇಕು. ಹೃದಯ ಸಂಬಂಧಿ ಕಾಯಿಲೆ ಇರುವವರು ಹೆಚ್ಚು ಎಚ್ಚರ ವಹಿಸಬೇಕು. ದೇಹವನ್ನು ಬಿಸಿಯಾಗಿ ಇಟ್ಟಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.