ಸೇಡಂ: ‘ಗಣೇಶ ಚತುರ್ಥಿ ಹಾಗೂ ಈದ್–ಮಿಲಾದ್ ಹಬ್ಬವನ್ನು ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದಯುತವಾಗಿ ಆಚರಿಸಬೇಕು’ ಎಂದು ಸಿಪಿಐ ಮಹಾದೇವ ದಿಡ್ಡಿಮನಿ ತಿಳಿಸಿದರು.

ತಾಲ್ಲೂಕಿನ ಮಳಖೇಡ ಪೊಲೀಸ್ ಠಾಣೆಯಲ್ಲಿ ಗುರುವಾರ ಗಣೇಶ ಚತುರ್ಥಿ ಹಾಗೂ ಈದ್–ಮಿಲಾದ್ ಹಬ್ಬದ ಅಂಗವಾಗಿ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

‘ಮಳಖೇಡದಲ್ಲಿ ಯಾವತ್ತಿಗೂ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸುತ್ತಾ ಬರಲಾಗಿದೆ. ಹಿರಿಯರು ಹಬ್ಬ ಹರಿದಿನಗಳಲ್ಲಿ ಕಿರಿಯರಿಗೆ ಸರಿಯಾಗಿ ಮಾರ್ಗದರ್ಶನ ನೀಡಬೇಕು. ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು’ ಎಂದರು.

‘ಗ್ರಾಮದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾದಲ್ಲಿ ಅಲ್ಲಿಯೇ ಇತ್ಯರ್ಥಪಡಿಸಿಕೊಳ್ಳಬೇಕು. ಜೊತೆಗೆ ಪೊಲೀಸರ ಗಮನಕ್ಕೂ ತರಬೇಕು. ಇದರಿಂದ ಮುಂದಾಗುವ ದೊಡ್ಡ ಅನಾಹುತವನ್ನು ತಡೆಗಟ್ಟಬಹುದಾಗಿದೆ’ ಎಂದರು.

ಪಿಎಸ್ಐ ಸಂಗಮೇಶ ಅಂಗಡಿ ಮಾತನಾಡಿ, ‘ಗಣೇಶ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೂ ಯಾವುದೇ ರೀತಿಯ ಗೊಂದಲವಾಗದಂತೆ ಯುವಕರು ಹಬ್ಬ ಆಚರಿಸಬೇಕು. ಸಾಹಸ ಕೆಲಸಕ್ಕೆ ಮುಂದಾಗಿ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸೂಚಿಸಿದರು.

ಮಳಖೇಡ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಪಾಟೀಲ, ಭೀಮರಾವ ಪಾಟೀಲ, ದೇವಾನಂದ ಪುರಾಣಿಕ, ಸುಂದರ ಮಂಗಾ, ನಾಗರಾಜ ನಂದೂರ, ಮೌಲಾ ಕುಂಡಾ, ರಫಿಕ ಬಳಗಾರ, ಪೊಲೀಸ್ ಇಲಾಖೆ ಸಿಬ್ಬಂದಿ ಎಎಸ್ಐ ಶಿವಶರಣಪ್ಪ, ಸುಭಾಶ್ಚಂದ್ರ, ಹೆಡ್ಕಾನ್ಸ್ಟೇಬಲ್ ಮಲ್ಕಪ್ಪ ಗೌಡಗಾಂವ, ಆಸೀಫಿಮಿಯಾ, ಸುರೇಶ ಸೇರಿದಂತೆ ಅನೇಕರಿದ್ದರು.

‘ಕಾನೂನು ಸುವ್ಯವಸ್ಥೆ ಕಾಪಾಡಿ’

ಜೇವರ್ಗಿ: ‘ಭಾವೈಕ್ಯಕ್ಕೆ ಜೇವರ್ಗಿ ತಾಲ್ಲೂಕು ಹೆಸರುವಾಸಿಯಾಗಿದೆ. ಮುಂಬರುವ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಹಿಂದೂ–ಮುಸ್ಲಿಂ ಸಮುದಾಯದವರು ಶಾಂತ ರೀತಿಯಿಂದ ಆಚರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ, ಜನರಿಗೆ ತೊಂದರೆ ನೀಡಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗಣೇಶ ಹಬ್ಬದಂದು ಮೂರ್ತಿ ಪ್ರತಿಷ್ಠಾಪನೆ ಮಾಡಲು ಪೆಂಡಾಲ್ ಹಾಕುವವರು, ಪುರಸಭೆ, ಪೊಲೀಸರು, ಅಗ್ನಿಶಾಮಕದಳ, ಜೆಸ್ಕಾಂನಿಂದ ಅನುಮತಿ ಪಡೆಯುವುದು ಕಡ್ಡಾಯ. ಪೆಂಡಾಲ್ನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಅನುಮತಿ ಪಡೆದವರು, ಜವಾಬ್ದಾರಿಯಿಂದ ನಡೆದುಕೊಂಡು ಹಬ್ಬವನ್ನು ಸುಗಮವಾಗಿ ನಡೆಸಬೇಕು ಎಂದು ಹೇಳಿದರು.

ಯಾವುದೇ ಮೆರವಣಿಗೆ ಇದ್ದರೂ ರಾತ್ರಿ 10ರೊಳಗೆ ಮುಗಿಸಬೇಕು. ಜೋರಾದ ಸಂಗೀತದ ಧ್ವನಿವರ್ಧಕ ಬಳಸಬಾರದು. ಸರ್ಕಾರ ನಿಯಮಾವಳಿ ಪ್ರಕಾರವೇ ಹಬ್ಬವನ್ನು ಆಚರಿಸಬೇಕು ಎಂದರು.

ಪಟ್ಟಣದ ಮುಸ್ಲಿಂ ಸಮುದಾಯದವರು, ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದರು.

ಡಿವೈಎಸ್ಪಿ ಲೋಕೇಶ, ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ತಾಪಂ ಇಒ ರವಿಚಂದ್ರರೆಡ್ಡಿ ಲಕ್ಕುಂಡಿ, ಸರ್ಕಲ್ ಇನ್ಸಪೆಕ್ಟರ್ ರಾಜೇಸಾಬ ನದಾಫ್, ಪಿಎಸ್ಐ ಗಜಾನಂದ ಬಿರಾದಾರ, ನೆಲೋಗಿ ಪಿಎಸ್ಐ ಚಿದಾನಂದ ಸವದಿ, ಪ್ರಮುಖರಾದ ರವಿ ಕೋಳಕೂರ, ರವಿಚಂದ್ರ ಗುತ್ತೇದಾರ, ಮೋಹಿನುದ್ದೀನ್ ಇನಾಮದಾರ, ಈಶ್ವರ ಹಿಪ್ಪರಗಿ, ಆನಂದ ದೇಸಾಯಿ, ಶರಣು ಕೋಳಕೂರ, ಅನೀಲ ದೊಡ್ಡಮನಿ, ಬಸಣ್ಣ ಸರ್ಕಾರ, ಸಿದ್ದು ಕೆರೂರ, ಇಮ್ರಾನ್ ಕಾಸರಬೋಸಗಾ, ಗನಿಸೇಠ ಮಿರ್ಚಿ, ಘನಿ ಜೇವರ್ಗಿ, ಗೌಸ್ ಮೈನುದ್ದೀನ್ ಖಾದ್ರಿ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.