ಸೋಮವಾರ, ಮಾರ್ಚ್ 8, 2021
27 °C

ಕಲಬುರ್ಗಿ: ಬಸ್ ಸ್ಥಗಿತ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ತಾಲ್ಲೂಕಿನ ಹಾಗರಗುಂಡಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಭಾನುವಾರ  ಬೆಳಿಗ್ಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಹಾಗರಗುಂಡಗಿಯಿಂದ ಜನರು ನಿತ್ಯ ಕಲಬುರ್ಗಿಗೆ ಬಂದು ಹೋಗುತ್ತಾರೆ. ಕೆಲಸದ ನಿಮಿತ್ತ, ಸರ್ಕಾರಿ ನೌಕರಿ, ಶಾಲಾ ಕಾಲೇಜು ಸೇರಿ ಪ್ರತಿಯೊಂದಕ್ಕೂ ಗ್ರಾಮಸ್ಥರು ಕಲಬುರ್ಗಿ ಮೇಲೆ ಅವಲಂಬಿತರಾಗಿದ್ದಾರೆ. ಈ ಮುಂಚೆ ಗ್ರಾಮದಿಂದ ಒಂದು ಬಸ್ ಕಲಬುರ್ಗಿಗೆ ಓಡಿಸಲಾಗುತಿತ್ತು. ಆದರೆ, ಲಾಕ್​ಡೌನ್ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: 

ಬಸ್ ಇಲ್ಲದೆ ನಿತ್ಯ ಗೋಳಾಟ ನಡೆದಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಸ್ಪಂದಿಸದ ಕಾರಣ ಬೆಳಿಗ್ಗೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು. ಪಕ್ಕದ ಮೈನಾಳ ಗ್ರಾಮಕ್ಕೆ ತೆರಳಿದ್ದ ಬಸ್ ತಡೆದು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು