ಗೋಣಿಕೊಪ್ಪಲು: ‘ಹುದಿಕೇರಿಯಲ್ಲಿ 66 ಕೆವಿ ವಿದ್ಯುತ್ ವಿನಿಮಯ ಕೇಂದ್ರ ನಿರ್ಮಾಣಗೊಳ್ಳಲಿದೆ’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ನಡೆಯಲಿರುವ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು,‘ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಹುದಿಕೇರಿಯಿಂದ ಬಿರುನಾಣಿಗೆ 33 ಕೆವಿ ಫೀಡರ್ ಮೂಲಕ ಪ್ರತ್ಯೇಕ ವಿದ್ಯುತ್ ವಿನಿಮಯ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗುವುದು. ಇದರಿಂದಾಗಿ ಈ ವ್ಯಾಪ್ತಿಯ ಬಹುಕಾಲದ ವಿದ್ಯುತ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ತೆರಾಲು ಗ್ರಾಮದಲ್ಲಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ ಅಡಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಕಾಮಗಾರಿ ಕಳಪೆ ಮಟ್ಟದಾಗಿದೆ ಎಂದು ಸ್ಥಳೀಯರ ದೂರನ್ನು ಪರಿಶೀಲಿಸಿದ ಶಾಸಕ ಪೊನ್ನಣ್ಣ ಗುತ್ತಿಗೆದಾರರಿಗೆ ಮರು ಡಾಂಬರೀಕರಣ ಮಾಡುವಂತೆ ಖಡಕ್ ಸೂಚನೆ ನೀಡಿದರು.

ಜಿಲ್ಲಾ ಗ್ಯಾರೆಂಟಿ ಅನುಸ್ಥಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ತಾಲ್ಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳ ಮಾಡಲಾಲಾ ಅಪ್ಪಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಂ, ಮುಖಂಡ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಬುಟ್ಟಿಯಂಡ ನಾಣಯ್ಯ, ಮುಕ್ಕಾಟೀರ ಸಂದೀಪ್, ಹಾಗೂ ಗ್ರಾಮಸ್ಥರಾದ ಬೊಟ್ಟಂಗಡ ಜಗದೀಶ್, ಬೊಟ್ಟಂಗಡ ಪ್ರೇಮ, ಕೊಟ್ಟಂಗಡ ಪ್ರತಾಪ್, ಕಾಳಿಮಾಡ ರಶೀಕ್, ನೆಲ್ಲೀ ಸೋಮಣ್ಣ, ಅಣ್ಣಳಮಾಡ ಗಿರೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.