ಕುಶಾಲನಗರ: ‘ವೈವಿಧ್ಯಮಯ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿ ಸಮ್ಮಿಲನವಾಗಿರುವ ಭಾರತ ಕರಕುಶಲ ಕಲೆಗೆ ವಿಶ್ವದೆಲ್ಲೆಡೆ ಪ್ರಸಿದ್ಧಿಯಾಗಿದೆ. ಇಲ್ಲಿನ ಕರಕುಶಲ ವಸ್ತುಗಳು, ಉಪಕರಣಗಳೊಂದಿಗೆ ಕೈಯಿಂದ ವಸ್ತುಗಳನ್ನು ಸಂಸ್ಕರಿಸುವುದು ಪುರಾತನ ಕಾಲದಿಂದಲೂ ರೂಢಿಯಾಗಿ ಬಂದಿದೆ’ ಎಂದು ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ಪ್ರಬಂಧಕ ಆರ್.ಕೆ.ಬಾಲಚಂದ್ರ ತಿಳಿಸಿದರು.

ಇಲ್ಲಿ ಗುರುವಾರ ಕೇಂದ್ರ ಕರಕುಶಲ ಮತ್ತು ಜವಳಿ ಮಂತ್ರಾಲಯ ಇಲಾಖೆ ಮೈಸೂರಿನ ಕರಕುಶಲ ವಿಸ್ತರಣಾ ಸೇವಾ ಕೇಂದ್ರದಿಂದ ಮೂರು ದಿನ ಕರಕುಶಲ ವಸ್ತುಗಳ ತಯಾರಿಕೆ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,‘ಇಂತಹ ವಸ್ತುಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಕರಕುಶಲ ತರಬೇತಿ ಶಿಬಿರಗಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ. ಈ ತರಬೇತಿ ಪಡೆದವರಿಗೆ ಅನೇಕ ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿಗಳು ಕರಕುಶಲ ಕಲೆಯಿಂದ ಕ್ರಿಯಾಶೀಲ ಮತ್ತು ಸೃಜನಶೀಲತೆ ಬೆಳೆಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಬದುಕನ್ನು ಸವಾಲಾಗಿ ಸ್ವೀಕರಿಸಿ ಬದುಕಿನ ಮಜಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದರು.

ಶಿಬಿರದ ಜಿಲ್ಲಾ ಸಂಯೋಜಕ ಕುಶಲಕರ್ಮಿ ಜಿ.ಧರ್ಮಪ್ಪ ಮಾತನಾಡಿ,‘ಈ ಕಲೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಗಳಲ್ಲಿ ಇಂತಹ ಶಿಬಿರ ಸಂಘಟಿಸಲಾಗುತ್ತಿದೆ. ಈ ಶಿಬಿರದಲ್ಲಿ ಬಿದಿರು ಕಲೆ, ಮರ ಕೆತ್ತನೆ, ಮಣ್ಣಿನ ಕಲಾಕೃತಿಗಳ ತಯಾರಿಕೆ ಸೇರಿ ಇನ್ನಿತರ ಕರಕುಶಲ ಕಲೆಗಳ ಬಗ್ಗೆ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕರಕುಶಲ ಕಲೆಯಿಂದ ಆರ್ಥಿಕ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮ ದೇಶದ ಆರ್ಥಿಕವೃದ್ಧಿಗೆ ಕರಕುಶಲ ಕಲೆ ಸಹಕಾರಿಯಾಗಿವೆ’ ಎಂದರು.

ಸಚಿವಾಲಯದ ವಿಸ್ತರಣಾ ಕೇಂದ್ರದ ಅಭಿವೃದ್ಧಿ ಅಧಿಕಾರಿ ಎಂ.ಬಿ.ಶಾಬೀರ ಶಿಬಿರದ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿ, ‘ಕರಕುಶಲ ಕಲೆ, ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ದಿಸೆಯಲ್ಲಿ ಇಂತಹ ಜಾಗೃತಿ ಶಿಬಿರ ಸಂಘಟಿಸಲಾಗುತ್ತಿದೆ’ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ,‘ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ತಮ್ಮ ಕಲಿಕೆಯೊಂದಿಗೆ ವೃತ್ತಿಪರ ಬದುಕಿಗೆ ಸಹಕಾರಿಯಾಗಿವೆ’ ಎಂದರು.

ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕರಕುಶಲ ಕಲೆ ಹಾಗೂ ಕಲಾಕೃತಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಈ ಸಂದರ್ಭ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಪಿಯೂ ಕಾಲೇಜಿನ ಪ್ರಾಂಶುಪಾಲ ಡಾ ಎನ್. ನಾಗೇಂದ್ರಸ್ವಾಮಿ, ಸಚಿವಾಲಯದ ಅಭಿವೃದ್ಧಿ ಅಧಿಕಾರಿ ಸ್ವದೇಶ್ ಘಾರ, ಸಿಬ್ಬಂದಿ ಎಚ್.ಜಿ.ಮಹೇಶ್ , ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.