ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ದೂರು | ಸೆಸ್ಕ್‌ ಸಿಬ್ಬಂದಿಯಿಂದ ಮೀಟರ್ ತೆರವು: ಆಕ್ರೋಶ

ಮಾಲಗಾರನಹಳ್ಳಿ ಜನರಿಂದ ಪಾವತಿಸದ ವಿದ್ಯುತ್ ಹಳೆ ಬಿಲ್; ಕ್ರಮಕ್ಕೆ ಮುಂದಾದ ಸೆಸ್ಕ್
Published 18 ಮೇ 2024, 14:48 IST
Last Updated 18 ಮೇ 2024, 14:48 IST
ಅಕ್ಷರ ಗಾತ್ರ

ಮದ್ದೂರು: ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಸೆಸ್ಕ್‌ ಸಿಬ್ಬಂದಿ ತಾಲ್ಲೂಕಿನ ಮಾಲಗಾರನಹಳ್ಳಿಯಲ್ಲಿ ಹಲವು ಮನೆಗಳ ವಿದ್ಯುತ್ ಮೀಟರ್‌ಗಳನ್ನೇ ಶುಕ್ರವಾರ ಬಿಚ್ಚಿಕೊಂಡು ಹೋಗಿದ್ದಾರೆ.

ಗ್ರಾಮದ ಚಂದ್ರಶೇಖರ್‌, ವೇದಾ, ರಾಜ ಸೇರಿದಂತೆ ಸುಮಾರು 8 ಮನೆಗಳ ವಿದ್ಯುತ್ ಮೀಟರ್‌ಗಳನ್ನು ಎ.ಇ ನಾಗಾಭಿಷೇಕ್ ಹಾಗೂ ಸಿಬ್ಬಂದಿ  ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ತೆರವು ಮಾಡಿದ್ದಾರೆ. ಈ ವೇಳೆ ಮನೆಯವರು ಎಷ್ಟೇ ಮನವಿ ಮಾಡಿದರೂ ಸಿಬ್ಬಂದಿ ಕಿವಿಗೊಡಲಿಲ್ಲ ಎನ್ನಲಾಗಿದೆ. ಇದರಿಂದ ಶುಕ್ರವಾರ ರಾತ್ರಿ ‘ಗೃಹಜ್ಯೋತಿ’ಗೆ ಅರ್ಹರಿದ್ದರೂ ಈ ಮನೆಗಳಿಗೆ ಕರೆಂಟ್‌ ಇಲ್ಲದೆ ಕಾಲ ಕಳೆದರೂ.

ಈ ಬಗ್ಗೆ ಪ್ರಗತಿಪರ ಸಂಘಟನೆಗಳ ಮುಖಂಡರಾದ ನ.ಲಿ.ಕೃಷ್ಣ ಅವರು, ಸೆಸ್ಕ್ ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯ ಕುರಿತು ಮಾತನಾಡಿದರೂ ಪ್ರಯೋಜನವಾಗದ ನಂತರ ತಹಶೀಲ್ದಾರ್ ಸೋಮಶೇಖರ್ ಅವರಿಗೆ ಈ ಬಗ್ಗೆ ಗಮನಕ್ಕೆ ತಂದು ಗ್ರಾಮಸ್ಥರೊಟ್ಟಿಗೆ ಚರ್ಚಿಸಿದ್ದಾರೆ.

ಅಷ್ಟರಲ್ಲಿ ಶನಿವಾರವೂ ಮತ್ತೆ ಸೆಸ್ಕ್‌ ಸಿಬ್ಬಂದಿ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಆ ಸಿಬ್ಬಂದಿ ವಾಪಸ್ ಹೋದರು.

ಆ ಬಳಿಕ ನ.ಲಿ.ಕೃಷ್ಣ ಅವರು ಪರಿಸ್ಥಿತಿ ಬಗ್ಗೆ ತಹಶೀಲ್ದಾರ್‌ರಿಗೆ ತಿಳಿಸಿ, ‘ಬರಗಾಲದ ಪರಿಸ್ಥಿತಿಯಲ್ಲಿ ಮೈಕ್ರೊ ಫೈನಾನ್ಸ್ ಬಗ್ಗೆ ಬಲವಂತದ ವಸೂಲಿಯನ್ನು ಮಾಡಬಾರದು ಎಂದು ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆದೇಶಿದ ಬೆನ್ನಲ್ಲೇ ಈ ರೀತಿ ಸೆಸ್ಕ್‌ ಸಿಬ್ಬಂದಿ ಹಳೆ ಬಿಲ್ ಪಾವತಿಗಾಗಿ ಬಲವಂತವಾಗಿ ರೈತರ ಮನೆಗಳ ವಿದ್ಯುತ್ ಮೀಟರ್‌ಗಳನ್ನು ತೆರವುಗೊಳಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸೂಕ್ತ ನಿರ್ದೇಶನ ನೀಡುವಂತೆ’ ಮನವಿ ಮಾಡಿದರು.

ತಹಶೀಲ್ದಾರ್ ಸೋಮಶೇಖರ್ ಅವರು ಸೆಸ್ಕ್‌ ಅಧಿಕಾರಿಗೆ ಮಾತನಾಡಿ, ರೈತರ ಮನೆಗಳ ವಿದ್ಯುತ್ ಮೀಟರ್‌ಗಳನ್ನು ಮರು ಅಳವಡಿಸಲು ಕ್ರಮವಹಿಸಲು ಸೂಚಿಸಿದ್ದಾರೆ.

Highlights - ಕರೆಂಟ್‌ ಇಲ್ಲದೆ ರಾತ್ರಿ ಕಳೆದ ಹಲವು ಕುಟುಂಬಗಳು ಜನರ ಕಷ್ಟ ಹೇಳಿದ ಮುಖಂಡರು ಮೀಟರ್‌ ಮರು ಜೋಡಿಸಲು ತಹಶೀಲ್ದಾರ್ ಸೂಚನೆ

Graphic text / Statistics - ಮದ್ದೂರು: ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಸೆಸ್ಕ್‌ ಸಿಬ್ಬಂದಿ ತಾಲ್ಲೂಕಿನ ಮಾಲಗಾರನಹಳ್ಳಿಯಲ್ಲಿ ಮನೆಗಳ ವಿದ್ಯುತ್ ಮೀಟರ್‌ಗಳನ್ನೇ ಬಿಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಗ್ರಾಮದ ಚಂದ್ರಶೇಖರ ವೇದ ರಾಜ ಸೇರಿದಂತೆ ಸುಮಾರು 8 ಮನೆಗಳ ವಿದ್ಯುತ್ ಮೀಟರ್ ಗಳನ್ನು ಎ ಇ ನಾಗಭಿಷೇಕ್ ಸೇರಿದಂತೆ ಸಿಬ್ಬಂದಿಗಳು ಹಳೇಯ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ತೆರವುಮಾಡಿದ್ದಾರೆ ಈ ವೇಳೆ ಮನೆಯವರು ಎಷ್ಟೇ ಕೇಳಿಕೊಂಡರೂ ಸಿಬ್ಬಂದಿಗಳು ಕಿವಿಗೊಡಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಗೃಹಜ್ಯೋತಿ ಯೋಜನೆಯಿಂದ ವಂಚಿತರಂತೆ ಶುಕ್ರವಾರ ರಾತ್ರಿಯಿಂದ ಸಂಬಂಧಪಟ್ಟ ಮನೆಮಂದಿ ಕಾಲಕಳೆದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಪ್ರಗತಿಪರಪರ ಸಂಘಟನೆಗಳ ಮುಖಂಡರಾದ ನ. ಲಿ ಕೃಷ್ಣ ರವರು ಸಂಬಂಧಪಟ್ಟ ಸೆಸ್ಕಾಂ ಸೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯ ಕುರಿತು ಮಾತನಾಡಿದರೂ ಪ್ರಯೋಜನವಾಗದ ನಂತರ ತಹಶೀಲ್ದಾರ್ ಸೋಮಶೇಖರ್ ರವರಿಗೆ ಈ ಬಗ್ಗೆ ಗಮನಕ್ಕೆ ತಂದು ಗ್ರಾಮಸ್ಥರೊಟ್ಟಿಗೆ ಚರ್ಚಿಸಿದ್ದಾರೆ. ಅಷ್ಟರಲ್ಲಿ ಶನಿವಾರವೂ ಮತ್ತೆ ಸೆಸ್ಕಾಂ ನ ಸಿಬ್ಬಂದಿಗಳು ಗ್ರಾಮಕ್ಕೆ ತೆರಳಿದಾಗ ಗ್ರಾಮಸ್ಥರು ಜಮಾಯಿಸಿ ಪ್ರತಿರೋಧ ತೋರಿ ಆಕ್ರೋಶವ್ಯಕ್ತಪಡಿಸಿದ ನಂತರ ಅಲ್ಲಿಂದ ಸೆಸ್ಕಾಂ ಸಿಬ್ಬಂದಿಗಳು ತೆರಳಿದ್ದಾರೆ. ಆ ಬಳಿಕ ಮುಖಂಡ ಪರಿಸ್ಥಿತಿ ಬಗ್ಗೆ ತಹಶೀಲ್ದಾರ್ ರಿಗೆ ತಿಳಿಸಿ ಮಾತನಾಡಿ ಬರಗಾಲದ ಪರಿಸ್ಥಿತಿಯಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ಬಲವಂತದ ವಸೂಲಿಯನ್ನು ಮಾಡಬಾರದು ಎಂದು ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆದೇಶಿದ ಬೆನ್ನಲೇ ಈ ರೀತಿ ಸೆಸ್ಕಾಂ ನ ಸಿಬ್ಬಂದಿಗಳು ಬಲವಂತವಾಗಿ ರೈತರ ಮನೆಗಳ ವಿದ್ಯುತ್ ಮೀಟರ್ ಗಳನ್ನು ಹಳೇ ಬಾಕಿ ಪಾವತಿಸಿಲ್ಲವೆಂಬ ಕಾರಣಕ್ಕೆ ತೆರವು ಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು. ಈ ಬಗ್ಗೆ ಸೆಸ್ಕಾಂ ನ ಅಧಿಕಾರಿಗಳೊಂದಿಗೆ ತಹಶೀಲ್ದಾರ್ ಸೋಮಶೇಖರ್ ಮಾತನಾಡಿ ರೈತರ ಮನೆಗಳ ವಿದ್ಯುತ್ ಮೀಟರ್ ಗಳನ್ನು ಮರು ಅಳವಡಿಸಲು ಕ್ರಮವಹಿಸಲು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT