ಶ್ರೀರಂಗಪಟ್ಟಣ: ‘ಎಂತಹದ್ದೇ ಸಂದರ್ಭ ಬಂದರೂ ಮೈಕ್ರೊ ಫೈನಾನ್ಸ್ಗಳಿಂದ ಸಾಲ ಪಡೆಯಬೇಡಿ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಮಹಿಳೆಯರಿಗೆ ಕೈ ಮುಗಿದು ಮನವಿ ಮಾಡಿದರು.

ತಾಲ್ಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಸಂಜೀವಿನ ಸರ್ಎಂವಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ಭವನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಮೈಕ್ರೊ ಫೈನಾನ್ಸ್ಗಳಲ್ಲಿ ಸಾಲ ಪಡೆದರೆ ಅದನ್ನು ತೀರಿಸಲು ಪರದಾಡಬೇಕಾಗುತ್ತದೆ. ಬಡ್ಡಿ ದರಕ್ಕೆ ಹೈರಾಣಾಗಬೇಕಾಗುತ್ತದೆ. ಮನೆ ಬಾಗಿಲಿಗೇ ಬಂದು ಪೀಡಿಸುತ್ತಾರೆ. ಸುಲಭದಲ್ಲಿ ಸಾಲ ಸಿಗುತ್ತದೆ ಎಂಬ ಆಸೆಗೆ ಮೈಕ್ರೊಫೈನಾನ್ಸ್ಗಳಿಂದ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕಬೇಡಿ’ ಎಂದು ಹೇಳಿದರು.

‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ರಾಜ್ಯ ಸರ್ಕಾರ ಬಡ್ಡಿ ರಹಿತ ಸಾಲ ನೀಡುತ್ತಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ನಬಾರ್ಡ್ನಿಂದ ಹಣ ಪಡೆದು ಸಾಲ ಕೊಡುತ್ತಿದೆ. ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿದೆ. ಹಸು ಸಾಕಣೆ, ಮಕ್ಕಳ ಶಿಕ್ಷಣ, ಚಿಕಿತ್ಸೆಯಂತಹ ಅಗತ್ಯ ಉದ್ದೇಶಗಳಿಗೆ ಈ ಹಣವನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮನ್ಮುಲ್ ನಿರ್ದೇಶಕ ಬಿ. ಬೋರೇಗೌಡ ಮಾತನಾಡಿ, ‘ಮಹಿಳಾ ಒಕ್ಕೂಟಗಳು ಕಿರು ಉದ್ಯಮ ಆರಂಭಿಸಿದರೆ ಉತ್ಪನ್ನಗಳಿಗೆ ಸರ್ಕಾರ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಿದೆ. . ಸ್ವಾವಲಂಬನೆ ಸ್ವಾಧಿಸಬೇಕು’ ಎಂ ದರು. ಒಕ್ಕೂಟದ ಎಂಬಿಕೆ ಜಿ.ಬಿ. ಅನುಷಾ ಮಾತನಾಡಿ, ‘ಒಕ್ಕೂಟದಲ್ಲಿ 40 ಸಂಘಗಳಿದ್ದು, ಇದುವರೆಗೆ ₹ 20 ಲಕ್ಷ ಸಾಲ ನೀಡಲಾಗಿದೆ’ ಎಂದರು. ಸಬ್ಬನಕುಪ್ಪೆ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ನಾರಾಯಣ, ಸಂಜೀವಿನ ಸರ್ಎಂವಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಬೃಂದಾವಣಿ, ಉಪಾಧ್ಯಕ್ಷೆ ಮಮತಾ ಬಿ.ಕೆ, ಕಾರ್ಯದರ್ಶಿ ಜಲಜಾ ಎಂ.ಎಸ್, ಸಹಕಾರ್ಯದರ್ಶಿ ಸವಿತಾ, ಖಜಾಂಚಿ ಉಮಾದೇವಿ, ಗ್ರಾ.ಪಂ. ಉಪಾಧ್ಯಕ್ಷೆ ಶ್ರುತಿ, ಸದಸ್ಯರಾದ ನಾಗರಾಜು, ಶಿವಕುಮಾರ್ ಜಿ.ಎಸ್, ಮಂಜುನಾಥ್. ಎಸ್, ಚಿದಂಬರ ಎಂ.ಸಿ, ಮುಖಂಡರಾದ ರೈಸ್ಮಿಲ್ ನಾಗರಾಜು, ಕೃಷ್ಣೇಗೌಡ, ರಾಮಲಿಂಗೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.